ADVERTISEMENT

ಬ್ರಿಟನ್‌ನಲ್ಲಿ ಬೆಕ್ಕಿಗೂ ಕೋವಿಡ್: ಪ್ರಾಣಿಗಳಿಂದ ವೈರಸ್ ಹರಡುವುದಿಲ್ಲ –ವೈದ್ಯರು

​ಪ್ರಜಾವಾಣಿ ವಾರ್ತೆ
Published 27 ಜುಲೈ 2020, 16:27 IST
Last Updated 27 ಜುಲೈ 2020, 16:27 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಲಂಡನ್: ಬ್ರಿಟನ್‌ನಲ್ಲಿ ಸಾಕು ಬೆಕ್ಕಿಗೆ ಕೊರೊನಾ ವೈರಸ್‌ ದೃಢಪಟ್ಟಿದ್ದು ಸೋಂಕಿಗೆ ಒಳಗಾಗಿರುವ ಮೊದಲ ಪ್ರಾಣಿಯಾಗಿದೆ ಎಂದು ಬ್ರಿಟನ್‌ ಆರೋಗ್ಯ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಲಂಡನ್ ಸಮೀಪದ ಸರ್ರೆಯಲ್ಲಿ ಬೆಕ್ಕಿಗೆ ಸೋಂಕು ತಗುಲಿರುವುದು ವರದಿಯಾಗಿದೆ.

ಬೆಕ್ಕಿಗೆ ಕೋವಿಡ್‌–19 ದೃಢಪಟ್ಟಿದೆ. ಈ ಸೋಂಕು ಸಾಕಿರುವವರಿಗೆ ಕೊರೊನಾ ಪಾಸಿಟಿವ್‌ ಇದುದ್ದರಿಂದ ಸೋಂಕು ಬೆಕ್ಕಿಗೂ ತಗುಲಿದ್ದು ಪ್ರಾಣಾಪಾಯವಿಲ್ಲ ಎಂದು ಪಶು ವೈದ್ಯರು ಖಚಿತಪಡಿಸಿದ್ದಾರೆ.

ADVERTISEMENT

ಹಾಗೆಯೇ ಸಾಕು ಪ್ರಾಣಿಗಳಿಗೆ ಕೋವಿಡ್‌ ತಗುಲಿದರೆ ಅವು ಸೋಂಕನ್ನು ವ್ಯಾಪಕವಾಗಿ ಹರಡುತ್ತವೆ ಎಂಬುದಕ್ಕೆ ಯಾವುದೇ ಪುರಾವೆಗಳು ಇಲ್ಲ ಎಂದು ಬ್ರಿಟನ್‌ ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಸೋಂಕು ತಗುಲಿರುವ ಬೆಕ್ಕಿಗೆ ಫೆಲಿನ್ ಹರ್ಪಿಸ್ ವೈರಸ್ ಸೋಂಕು ತಗುಲಿದೆ ಎಂದು ಖಾಸಗಿ ಪ್ರಯೋಗಾಲಯವೊಂದು ತಿಳಿಸಿತ್ತು. ನಂತರ ಕೋವಿಡ್‌ ಪರೀಕ್ಷೆ ಮಾಡಿಸಿದಾಗ ಪಾಸಿಟಿವ್‌ ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದು ಅತ್ಯಂತ ಅಪರೂಪದ ಘಟನೆ, ಸಾಕುಪ್ರಾಣಿಗಳು ವೈರಸ್ ಅನ್ನು ನೇರವಾಗಿ ಮಾನವರಿಗೆ ಹರಡುತ್ತವೆ ಎಂಬುದನ್ನು ಸಾಬೀತುಪಡಿಸಲು ಯಾವುದೇ ಪುರಾವೆಗಳಿಲ್ಲಎಂದು ವೈದ್ಯಾಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.