ADVERTISEMENT

ಸಾಗರದಲ್ಲಿ ಮುಳುಗಿತು 4,000 ಐಷಾರಾಮಿ ಕಾರುಗಳನ್ನು ಸಾಗಿಸುತ್ತಿದ್ದ ಹಡಗು!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಮಾರ್ಚ್ 2022, 11:28 IST
Last Updated 3 ಮಾರ್ಚ್ 2022, 11:28 IST
ಎಂಓಎಲ್ ಶಿಫ್‌ ಮ್ಯಾನೇಜ್‌ಮೆಂಟ್ ಕಂಪನಿಯ ಹಡಗಿನಲ್ಲಿ ಪೋರ್ಚುಗಲ್ ಬಳಿ ಬೆಂಕಿ ಕಾಣಿಸಿಕೊಂಡ ಸಂದರ್ಭ– ಚಿತ್ರ ಕೃಪೆ–ಎಎಫ್‌ಪಿ
ಎಂಓಎಲ್ ಶಿಫ್‌ ಮ್ಯಾನೇಜ್‌ಮೆಂಟ್ ಕಂಪನಿಯ ಹಡಗಿನಲ್ಲಿ ಪೋರ್ಚುಗಲ್ ಬಳಿ ಬೆಂಕಿ ಕಾಣಿಸಿಕೊಂಡ ಸಂದರ್ಭ– ಚಿತ್ರ ಕೃಪೆ–ಎಎಫ್‌ಪಿ   

ಬೆಂಗಳೂರು: ಲ್ಯಾಂಬೊರ್ಗಿನಿ, ಔಡಿ, ಪಾರ್ಶೆ, ಬೆಂಟ್ಲಿ ಸೇರಿದಂತೆ 4000 ಕ್ಕೂ ಹೆಚ್ಚು ಐಷಾರಾಮಿ ಕಾರುಗಳನ್ನು ಸಾಗಿಸುತ್ತಿದ್ದ ಬೃಹತ್ ಹಡಗೊಂದು ಪೋರ್ಚುಗಲ್ ಬಳಿ ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿರುವ ಘಟನೆ ವರದಿಯಾಗಿದೆ.

ಜರ್ಮನಿಯ ಇಮ್‌ದಿನ್‌ನಿಂದ ಅಮೆರಿಕದ ರೋಡ್ ಐಲ್ಯಾಂಡ್ ಸ್ಟೇಟ್‌ಗೆ ಸಿಂಗಪುರದ ಎಂಓಎಲ್ ಶಿಪ್ಮ್ಯಾನೇಜ್‌ಮೆಂಟ್ ಕಂಪನಿಯ ಹಡಗು ತೆರಳುತ್ತಿತ್ತು. ಕಳೆದ ಫೆಬ್ರುವರಿ 17 ರಂದು ಪೋರ್ಚುಗಲ್ ಬಳಿಯ ಸೌತ್ ಆಫ್ ಅಜ್ರೂಸ್ ಬಳಿ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಎಂದು ಸಿಎನ್‌ಎನ್ ವರದಿ ಮಾಡಿದೆ.

ಬೆಂಕಿ ಕಾಣಿಸಿಕೊಂಡ ನಂತರಪೋರ್ಚುಗಲ್ ಕರಾವಳಿ ಪಡೆಯರಕ್ಷಣಾ ತಂಡ ಬೆಂಕಿ ನಂದಿಸಲು ಸಾಕಷ್ಟು ಶ್ರಮವಹಿಸಿತ್ತು. ಆದರೆ, ಹಡಗು ಸಾಗರದಲ್ಲಿ ಮುಳುಗಿರುವುದು ಮಾರ್ಚ್ 1 ರಂದು ಖಚಿತಪಟ್ಟಿದೆ ಎಂದು ಶಿಪ್ಮ್ಯಾನೇಜ್‌ಮೆಂಟ್ ಕಂಪನಿ ತಿಳಿಸಿದೆ.

ADVERTISEMENT

ಎಲ್ಲ ಐಷಾರಾಮಿ ಕಾರುಗಳುಬೆಂಕಿ ತಗುಲಿ, ನೀರಿನಲ್ಲಿ ಮುಳುಗಿವೆ ಎಂದು ಲ್ಯಾಂಬೊರ್ಗಿನಿ ಅಮೆರಿಕದ ಸಿಇಒ ಕೂಡ ಖಚಿತಪಡಿಸಿದ್ದಾರೆ.

ಘಟನೆಯಿಂದ ಒಟ್ಟು ₹2,506 ಕೋಟಿಯಷ್ಟು ಹಾನಿಯಾಗಿದ್ದು, ಕಾರುಗಳೆಲ್ಲವೂ ವಿಮೆ ಹೊಂದಿದ್ದವು ಎಂದು ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.