ಒಟ್ಟಾವಾ: ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಕೆನಡಾ ಸರ್ಕಾರ ಸೋಮವಾರ ಘೋಷಿಸಿದೆ.
‘ಬಿಷ್ಣೋಯಿ ಗ್ಯಾಂಗ್ ನಿರ್ದಿಷ್ಟ ಸಮುದಾಯಗಳ ಮೇಲೆ ಭಯೋತ್ಪಾದನೆ ಹೆಸರಿನಲ್ಲಿ ದಾಳಿ, ಹಿಂಸೆ ಹಾಗೂ ಬೆದರಿಸುವ ಕೆಲಸದಲ್ಲಿ ತೊಡಗಿದೆ. ಸಂಘಟನೆಯನ್ನು ಭಯೋತ್ಪಾದಕ ಗುಂಪು ಎಂದು ಪಟ್ಟಿ ಮಾಡುವ ಮೂಲಕ ಅವರ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಲು ಹೆಚ್ಚು ಅಧಿಕಾರ ಹಾಗೂ ಪರಿಣಾಮಕಾರಿಯಾದ ಸಾಧನ ಲಭ್ಯವಾಗಲಿದೆ’ ಎಂದು ಸಾರ್ವಜನಿಕ ಸುರಕ್ಷಿತ ಸಚಿವ ಗ್ಯಾರಿ ಆನಂದಸಂಗಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಯೋತ್ಪಾದಕ ಪಟ್ಟಿ ಎಂದು ಸರ್ಕಾರದ ಪರಿಗಣಿಸಿದ ನಂತರ ಸಂಘಟನೆಗೆ ಸೇರಿದ ಆಸ್ತಿ, ವಾಹನ ಹಾಗೂ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ಲಭ್ಯವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.