ADVERTISEMENT

ಕಚ್ಚಾ ತೈಲ ಉತ್ಪಾದನೆ ಹೆಚ್ಚಳಕ್ಕೆ ಒಪೆಕ್‌ ಅನುಮತಿ

ಏಜೆನ್ಸೀಸ್
Published 4 ಮಾರ್ಚ್ 2021, 22:21 IST
Last Updated 4 ಮಾರ್ಚ್ 2021, 22:21 IST

ಲಂಡನ್‌: ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಸಾರವಾಗಿ ಕಚ್ಚಾ ತೈಲ ಉತ್ಪಾದನೆ ಹೆಚ್ಚಳಕ್ಕೆ ಅನುಮತಿ ನೀಡಲು ತೈಲ ಉತ್ಪಾದನೆ ಮತ್ತು ರಫ್ತು ಮಾಡುವ ದೇಶಗಳ ಒಕ್ಕೂಟ (ಒಪೆಕ್‌) ಗುರುವಾರ ನಿರ್ಧರಿಸಿದೆ.

‘ರಷ್ಯಾ ಮತ್ತು ಕಜಕಸ್ತಾನಗಳು ಕ್ರಮವಾಗಿ ಪ್ರತಿದಿನ 130,000 ಹಾಗೂ 20,000 ಬ್ಯಾರೆಲ್‌ಗಳಷ್ಟು ಹೆಚ್ಚು ಕಚ್ಚಾ ತೈಲ ಉತ್ಪಾದನೆ ಮಾಡಲು ಅನುಮತಿ ನೀಡಲಾಗಿದೆ’ ಎಂದು ಸದಸ್ಯ ರಾಷ್ಟ್ರಗಳ ಸಚಿವರ ಮಟ್ಟದ ಸಭೆಯ ನಂತರ ಒಪೆಕ್ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT