ADVERTISEMENT

ಕೋವಿಡ್‌ ಹೆಚ್ಚಳ: ಭಾರತಕ್ಕೆ ನೆರವಾಗಲು 40 ಸಿಇಒಗಳಿಂದ ‘ಜಾಗತಿಕ ಕಾರ್ಯಪಡೆ’

‘ಸಾರ್ವಜನಿಕ–ಖಾಸಗಿ ಸಹಭಾಗಿತ್ವದ‘ದ ಕಾರ್ಯಪಡೆ

ಪಿಟಿಐ
Published 27 ಏಪ್ರಿಲ್ 2021, 8:16 IST
Last Updated 27 ಏಪ್ರಿಲ್ 2021, 8:16 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್‌: ಅಮೆರಿಕದ ಸುಮಾರು 40 ಪ್ರಮುಖ ಕಂಪನಿಗಳ ಮುಖ್ಯ ಕಾರ್ಯನಿರ್ವ ಹಣಾಧಿಕಾರಿಗಳು (ಸಿಇಒ) ಕೋವಿಡ್‌ ವಿರುದ್ಧದಭಾರತದ ಹೋರಾಟಕ್ಕೆ ನೆರವಾಗಲು ಮುಂದಾಗಿದ್ದು, ಈ ಸಂಬಂಧ ಸಂಪನ್ಮೂಲಗಳನ್ನು ಕ್ರೋಡೀಕರಿಸಲು ಜಾಗತಿಕ ಕಾರ್ಯಪಡೆ ರಚಿಸಿದ್ದಾರೆ.

ಅಮೆರಿಕದ ವಾಣಿಜ್ಯ ಮಂಡಳಿಯ ‘ಅಮೆರಿಕ–ಇಂಡಿಯಾ ಬಿಸಿನೆಸ್‌ ಕೌನ್ಸಿಲ್‌’ ಮತ್ತು ಅಮೆರಿಕ–ಇಂಡಿಯಾ ಸ್ಟ್ರಾಟಜಿಕ್ ಅಂಡ್ ಪಾರ್ಟನರ್‌ಶಿಪ್ ಒಕ್ಕೂಟ ಮತ್ತು ಬಿಸಿನೆಸ್‌ ರೌಂಡ್‌ ಟೇಬಲ್‌ ಸಂಘಟಿತ ಪ್ರಯತ್ನದೊಂದಿಗೆ ಈ ಜಾಗತಿಕ ಕಾರ್ಯಪಡೆ ರಚಿಸಲು ನಿರ್ಧರಿಸಲಾಯಿತು.

‘ಮುಂದಿನ ದಿನಗಳಲ್ಲಿ ಕಾರ್ಯಪಡೆಯ ಮೂಲಕ 20 ಸಾವಿರ ಆಮ್ಲಜನಕದ ಕಾನ್ಸಂಟ್ರೇಟರ್‌ಗಳನ್ನು ಭಾರತಕ್ಕೆ ಕಳುಹಿಸಲುಈ ಕಂಪನಿಗಳೊಂದಿಗೆ ಸೋಮವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು’ ಎಂದು ಡೆಲಾಯ್ಟ್‌ ಸಿಇಒ ಪುನೀತ್ ರಂಜನ್ ತಿಳಿಸಿದರು.

ADVERTISEMENT

ಭಾರತದಲ್ಲಿ ಕೋವಿಡ್‌ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಆ ದೇಶಕ್ಕೆ ಅಗತ್ಯವಾದ ಲಸಿಕೆ, ಆಮ್ಲಜನಕ ಮತ್ತು ಇತರೆ ಜೀವರಕ್ಷಕ ಪರಿಕರಗಳ ನೆರವು ಒದಗಿಸುವುದು ಈ ಜಾಗತಿಕ ಕಾರ್ಯಪಡೆಯ ಉದ್ದೇಶ. ಈ ಕಾರ್ಯಪಡೆಗೆ ‘ಗ್ಲೋಬಲ್ ಟಾಸ್ಕ್‌ ಫೋರ್ಸ್‌ ಆನ್ ಪ್ಯಾಂಡಮಿಕ್ ರೆಸ್ಪಾನ್ಸ್‌; ಮೊಬಲೈಜಿಂಗ್ ಫಾರ್ ಇಂಡಿಯಾ‘ ಎಂದು ಹೆಸರಿಡಲಾಗಿದೆ.

ಮತ್ತೊಂದು ದೇಶದಲ್ಲಿ ಉದ್ಭವಿಸಿರುವ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟನ್ನು ಪರಿಹರಿಸುವುದಕ್ಕಾಗಿ ಇದೇ ಮೊದಲ ಬಾರಿಗೆ ಅಮೆರಿಕದಲ್ಲಿ ಇಂಥ ಜಾಗತಿಕ ಕಾರ್ಯಪಡೆ ಆರಂಭವಾಗಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.