ಟ್ಯಾಂಗ್ ರೆಂಜಿಯಾನ್
Credit: X/@Muhamma22474285
ಶೆನ್‌ಜೆನ್ (ಚೀನಾ): ಲಂಚ ಪ್ರಕರಣಕ್ಕೆ ಸಂಬಂಧಿಸಿ ಚೀನಾದ ಮಾಜಿ ಕೃಷಿ ಮತ್ತು ಗ್ರಾಮೀಣ ವ್ಯವಹಾರಗಳ ಸಚಿವ ಟ್ಯಾಂಗ್ ರೆಂಜಿಯಾನ್ ಅವರಿಗೆ ಜಿಲಿನ್ ಪ್ರಾಂತ್ಯದ ನ್ಯಾಯಾಲಯವೊಂದು ಭಾನುವಾರ ಮರಣದಂಡನೆ ವಿಧಿಸಿದೆ ಎಂದು ಸರ್ಕಾರಿ ಸುದ್ದಿ ಸಂಸ್ಥೆ ‘ಕ್ಸಿನ್ಹುವಾ’ ವರದಿ ಮಾಡಿದೆ.
2007ರಿಂದ 2024ರವರೆಗೆ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದ ಟ್ಯಾಂಗ್ ಅವರು ಲಂಚದ ರೂಪದಲ್ಲಿ ಅಪಾರ ಪ್ರಮಾಣದ ನಗದು, ಆಸ್ತಿಯನ್ನು ಪಡೆದಿದ್ದಾರೆ ಎಂದು ಕ್ಸಿನ್ಹುವಾ ತಿಳಿಸಿದೆ.
ಚೀನಾದ ಕಮ್ಯುನಿಸ್ಟ್ ಪಕ್ಷವು ಟ್ಯಾಂಗ್ ಅವರನ್ನು 2024ರ ನವೆಂಬರ್‌ನಲ್ಲಿ ಪಕ್ಷದಿಂದ ಉಚ್ಚಾಟನೆ ಮಾಡಿತ್ತು. ಕೃಷಿ ಸಚಿವರಾಗಿ ನೇಮಕವಾಗುವುದಕ್ಕೂ ಮುನ್ನ ಟ್ಯಾಂಗ್ ಅವರು 2017ರಿಂದ 2020ರವರೆಗೆ ಚೀನಾದ ಗನ್ಸು ಪ್ರಾಂತ್ಯದ ಗವರ್ನರ್ ಆಗಿದ್ದರು.
‘ಭ್ರಷ್ಟಾಚಾರ’ವು ಚೀನಾದ ಕಮ್ಯುನಿಸ್ಟ್ ಪಕ್ಷಕ್ಕೆ ದೊಡ್ಡ ಬೆದರಿಕೆಯಾಗಿದೆ. ಇದು ಇನ್ನೂ ಹೆಚ್ಚುತ್ತಲೇ ಇದೆ ಎಂದು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಕೆಲವು ತಿಂಗಳ ಹಿಂದೆ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.