ADVERTISEMENT

ಕೋವಿಡ್‌ ಹೆಚ್ಚಳ: ಚೀನಾದ ಇನ್ನಷ್ಟು ಕಡೆ ಲಾಕ್‌ಡೌನ್‌

31 ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಏಜೆನ್ಸೀಸ್
Published 24 ನವೆಂಬರ್ 2022, 11:35 IST
Last Updated 24 ನವೆಂಬರ್ 2022, 11:35 IST
ಕೊರೊನಾ ಪ್ರಕರಣಗಳ ಏರಿಕೆ ಹಿನ್ನೆಲೆಯಲ್ಲಿ ಚೀನಾದ ಬೀಜಿಂಗ್‌ನಲ್ಲಿ ಲಾಕ್‌ಡೌನ್‌ ಜಾರಿಮಾಡಲಾಗಿದೆ. –ಎಪಿ ಚಿತ್ರ
ಕೊರೊನಾ ಪ್ರಕರಣಗಳ ಏರಿಕೆ ಹಿನ್ನೆಲೆಯಲ್ಲಿ ಚೀನಾದ ಬೀಜಿಂಗ್‌ನಲ್ಲಿ ಲಾಕ್‌ಡೌನ್‌ ಜಾರಿಮಾಡಲಾಗಿದೆ. –ಎಪಿ ಚಿತ್ರ   

ಬೀಜಿಂಗ್‌: ಚೀನಾದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಹಿಂದೆಯೇ ಇನ್ನಷ್ಟು ಪ್ರದೇಶಗಳಲ್ಲಿ ಲಾಕ್‌ಡೌನ್‌ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ. ಕೋವಿಡ್ ಕಠಿಣ ನಿರ್ಬಂಧ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಮಾರು 66 ಲಕ್ಷ ಜನಸಂಖ್ಯೆ ಇರುವ ಝೇಂಗ್‌ಝೌ ಪ್ರಾಂತ್ಯದ ಎಂಟು ಜಿಲ್ಲೆಗಳಲ್ಲಿ ಐದು ದಿನ ಲಾಕ್‌ಡೌನ್‌ ಘೋಷಿಸಲಾಗಿದೆ. ಆಹಾರ ಖರೀದಿ ಮತ್ತು ತುರ್ತು ಸಂದರ್ಭ ಹೊರತುಪಡಿಸಿ ಹೊರಗೆ ಬರದಂತೆ ಜನರಿಗೆ ಸೂಚಿಸಲಾಗಿದೆ.

ರಾಷ್ಟ್ರೀಯ ಆರೋಗ್ಯ ಆಯೋಗದ ವರದಿ ಪ್ರಕಾರ, ಗುರುವಾರ ಚೀನಾದಲ್ಲಿ 31,444 ಪ್ರಕರಣ ದಾಖಲಾಗಿದೆ. 2019ರಿಂದ ಈವರೆಗೆ ಒಂದೇ ದಿನ ದಾಖಲಾದ ಅತಿಹೆಚ್ಚು ಪ್ರಕರಣ ಇದಾಗಿದೆ.

ADVERTISEMENT

ಕೋವಿಡ್‌ ಕಠಿಣ ನಿರ್ಬಂಧ ವಿರೋಧಿಸಿ ಝೆಂಗ್‌ಝೌನಲ್ಲಿ ಕಾರ್ಖಾನೆಗಳ ನೌಕರರು ಪೊಲೀಸರು ಸಂಘರ್ಷ ನಡೆಸಿದ್ದು, ಪ್ರತಿಯಾಗಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರವನ್ನು ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.