ADVERTISEMENT

ಶೇಕಡ 6.8ರಷ್ಟು ರಕ್ಷಣಾ ಬಜೆಟ್‌ ಹೆಚ್ಚಿಸಿದ ಚೀನಾ

20900 ಕೋಟಿ ಡಾಲರ್‌ ನಿಗದಿ

ಪಿಟಿಐ
Published 5 ಮಾರ್ಚ್ 2021, 5:52 IST
Last Updated 5 ಮಾರ್ಚ್ 2021, 5:52 IST
ಚೀನಾ ಪ್ರಧಾನಿ ಲಿ ಕೆಖಿಯಾಂಗ್‌
ಚೀನಾ ಪ್ರಧಾನಿ ಲಿ ಕೆಖಿಯಾಂಗ್‌   

ಬೀಜಿಂಗ್‌: ಈ ಬಾರಿಯ ಬಜೆಟ್‌ನಲ್ಲಿ ರಕ್ಷಣಾ ಇಲಾಖೆಗೆ ಆದ್ಯತೆ ನೀಡಿರುವ ಚೀನಾ, ಶೇಕಡ 6.8ರಷ್ಟು ಮೊತ್ತವನ್ನು ಹೆಚ್ಚಿಸಿದೆ.

2021ರ ಬಜೆಟ್‌ನಲ್ಲಿ 20900 ಕೋಟಿ ಡಾಲರ್‌ನಷ್ಟು (₹1523504.45 ಕೋಟಿ ರೂಪಾಯಿ) ಅನುದಾನ ನಿಗದಿಪಡಿಸಿದೆ. ದೇಶದ ಸಂಸತ್‌ನಲ್ಲಿ ಚೀನಾ ಪ್ರಧಾನಿ ಲಿ ಕೆಖಿಯಾಂಗ್‌ ಮಂಡಿಸಿದ ಬಜೆಟ್‌ನಲ್ಲಿ ಈ ವಿಷಯ ಪ್ರಕಟಿಸಿದರು.

ಕಳೆದ ವರ್ಷ ಚೀನಾ 196.44 ಬಿಲಿಯನ್‌ ಡಾಲರ್‌ ಮೊತ್ತವನ್ನು ಬಜೆಟ್‌ನಲ್ಲಿ ನಿಗದಿಪಡಿಸಲಾಗಿತ್ತು.

ADVERTISEMENT

ರಕ್ಷಣಾ ಇಲಾಖೆಯ ಬಜೆಟ್‌ ಹೆಚ್ಚಿಸಿರುವುದನ್ನು ಸಮರ್ಥಿಸಿಕೊಂಡಿರುವ ನ್ಯಾಷನಲ್‌ ಪೀಪಲ್ಸ್‌ ಕಾಂಗ್ರೆಸ್‌ (ಎನ್‌ಪಿಸಿ) ವಕ್ತಾರ ಝಾಂಗ್‌ ಯೆಸುಯಿ, ‘ರಾಷ್ಟ್ರದ ರಕ್ಷಣೆಗೆ ಸಂಬಂಧಿಸಿದ ವಿಷಯ ಇದಾಗಿದೆ. ಆದರೆ, ಯಾವುದೇ ದೇಶವನ್ನು ಗುರಿಯಾಗಿರಿಸಿಕೊಂಡು ಅಥವಾ ಬೆದರಿಕೆ ಹಾಕಲು ಅನುದಾನವನ್ನು ಹೆಚ್ಚಿಸಿಲ್ಲ’ ಎಂದು ಪ್ರತಿಪಾದಿಸಿದ್ದಾರೆ.

‘ಯಾವುದೇ ದೇಶಕ್ಕೆ ರಕ್ಷಣಾ ನೀತಿ ಮುಖ್ಯವಾಗುತ್ತದೆ. ಇನ್ನೊಂದು ದೇಶಕ್ಕೆ ಬೆದರಿಕೆವೊಡ್ಡುವುದಕ್ಕೆ ಈ ನೀತಿಯೇ ಆಧಾರವಾಗಿರುತ್ತದೆ. ಚೀನಾ ಶಾಂತಿ ಕಾಪಾಡಲು ಬದ್ಧವಾಗಿದೆ. ರಕ್ಷಿಸಿಕೊಳ್ಳುವ ಕ್ರಮಗಳನ್ನು ಹೊಂದಿರುವ ರಕ್ಷಣಾ ನೀತಿಗೆ ಚೀನಾ ಬದ್ಧವಾಗಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.