ಪಾರ್ಕಿಂಗ್ ಜಗಳ ಶಿಕ್ಷಕ ಸಾವು
ಬೀಜಿಂಗ್: ಚೀನಾದ ಪ್ರಮುಖ ನದಿಯೊಂದರಲ್ಲಿ ನಿರ್ಮಿಸಲಾಗುತ್ತಿದ್ದ ರೈಲ್ವೆ ಮೇಲುಸೇತುವೆ ಕುಸಿದು 12 ಕಾರ್ಮಿಕರು ಮೃತಪಟ್ಟಿದ್ದಾರೆ ಮತ್ತು ನಾಲ್ವರು ಕಾಣೆಯಾಗಿದ್ದಾರೆ ಎಂದು ಸರ್ಕಾರಿ ಒಡೆತನದ ಮಾಧ್ಯಮ ಷಿನ್‌ಹುವಾ ವರದಿ ಮಾಡಿದೆ.
ವಾಯವ್ಯ ಚೀನಾದ ಕಿಂಘೈ ಪ್ರಾಂತ್ಯದಲ್ಲಿ ಮುಂಜಾನೆ 3 ಗಂಟೆ ವೇಳೆಗೆ ಸೇತುವೆ ಮುರಿದುಬಿದ್ದಿದೆ. ಈ ವೇಳೆ 16 ಕಾರ್ಮಿಕರು ಸೇತುವೆ ಮೇಲೆ ಇದ್ದರು. ನಾಪತ್ತೆಯಾದವರು ಪತ್ತೆಗಾಗಿ ದೋಣಿ, ಹೆಲಿಕಾಪ್ಟರ್, ರೋಬೋಟ್ ಬಳಸಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಸೇತುವೆಯು 1.6 ಕಿ.ಮೀ ಉದ್ದವಿದ್ದು, ನೀರಿನ ಮಟ್ಟದಿಂದ 55 ಮೀಟರ್ ಎತ್ತರದಲ್ಲಿದೆ ಎಂದು ಪತ್ರಿಕೆ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.