ಭಾರತ–ಪಾಕಿಸ್ತಾನ
– ಗೆಟ್ಟಿ ಚಿತ್ರ
ಇಸ್ಲಾಮಾಬಾದ್: ‘ಆಪರೇಷನ್ ಸಿಂಧೂರದ ವೇಳೆ ಉಲ್ಬಣಿಸಿದ್ದ ಪಾಕಿಸ್ತಾನ – ಭಾರತ ನಡುವಿನ ಸಂಘರ್ಷ ತಣಿಸುವಲ್ಲಿ ಚೀನಾದ ಪಾತ್ರವೂ ಇತ್ತು’ ಎಂದು ಪಾಕಿಸ್ತಾನ ಹೇಳಿದೆ. ಸಂಘರ್ಷ ಶಮನ ವಿಚಾರದಲ್ಲಿ ತಮ್ಮ ದೇಶ ವಹಿಸಿದ ಪಾತ್ರದ ಬಗ್ಗೆ ಚೀನಾದ ವಿದೇಶಾಂಗ ಸಚಿವರು ಇತ್ತೀಚೆಗೆ ಹೇಳಿಕೆ ನೀಡಿದ್ದರು.
2025ರಲ್ಲಿ ಚೀನಾವು ಮಧ್ಯಸ್ಥಿಕೆ ವಹಿಸಿದ ವಿಚಾರಗಳ ಪಟ್ಟಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಸಂಘರ್ಷದ ವಿಚಾರವನ್ನೂ ಸೇರಿಸಲಾಗಿದೆ. ಆದರೆ, ‘ಎರಡೂ ದೇಶಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (ಡಿಜಿಎಂಒ) ಸೇರಿ ಸಂಘರ್ಷ ಅಂತ್ಯಗೊಳಿಸುವ ಮಾತುಕತೆ ನಡೆಸಿದ್ದರು’ ಎಂದು ಭಾರತವು ಮೊದಲಿನಿಂದಲೂ ಹೇಳುತ್ತಾ ಬಂದಿದೆ.
‘ಪಾಕಿಸ್ತಾನದ ನಾಯಕರೊಂದಿಗೆ ಚೀನಾವು ನಿರಂತರವಾಗಿ ಸಂಪರ್ಕದಲ್ಲಿ ಇತ್ತು. ಮೇ 6ರಿಂದ 10ರ ಒಳಗೆ ಅಥವಾ ಅದಕ್ಕೂ ಮೊದಲು ಅಥವಾ ನಂತರ ಭಾರತದ ನಾಯಕರೊಂದಿಗೆ ಚೀನಾ ಮಾತುಕತೆ ನಡೆಸಿತ್ತು. ಶಾಂತಿ ನೆಲಸಲು ಚೀನಾ ನಡೆಸಿದ ರಾಜತಾಂತ್ರಿಕ ಯತ್ನ ಇದಾಗಿತ್ತು’ ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿ ವಕ್ತಾರ ತಾಹಿರ್ ಅಂದ್ರಾಬಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.