ADVERTISEMENT

ಕೋವಿಡ್‌ ಪ್ರಕರಣಗಳು ಪತ್ತೆಯಾದ ವಿಮಾನಗಳ ಸಂಚಾರ ನಿರ್ಬಂಧಿಸಿದ ಚೀನಾ 

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2021, 9:59 IST
Last Updated 22 ಅಕ್ಟೋಬರ್ 2021, 9:59 IST
   

ಬೀಜಿಂಗ್‌: ವಿಮಾನಗಳಲ್ಲಿ ಕೋವಿಡ್ -19 ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿಚೀನಾದ ನಾಗರಿಕ ವಿಮಾನಯಾನವು ಐದು ಅಂತರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿದೆ

ಈ ಕುರಿತು ಚೀನಾದ ರಾಷ್ಟ್ರೀಯ ಸುದ್ದಿ ವಾಹಿನಿಯೊಂದು ಶುಕ್ರವಾರ ವರದಿ ಮಾಡಿದೆ.

ಅ. 1ರಂದು ಫ್ರಾಂಕ್‌ಫರ್ಟ್‌ನಿಂದ ಚೀನಾದ ಚಾಂಗ್‌ಚುನ್‌ಗೆ ಬಂದ ಏರ್‌ ಚೀನಾ ವಿಮಾನದ ಪ್ರಯಾಣಿಕರ ಪೈಕಿ ಆರು ಮಂದಿಗೆ ಕೋವಿಡ್‌ ಇರುವುದು ಗೊತ್ತಾಗಿತ್ತು. ಇದರ ಜೊತೆಗೆ ಇನ್ನೂ ಹಲವು ವಿಮಾನಗಳಲ್ಲಿಯೂ ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ ಎಂದು ಸರ್ಕಾರ ಹೇಳಿದೆ.

ADVERTISEMENT

ಕೊರೊನಾ ಸೋಂಕಿತರು ಪತ್ತೆಯಾದ ವಿಮಾನಗಳನ್ನು ನಿರ್ಬಂಧಿಸುವ ತೀರ್ಮಾನವನ್ನು ಪ್ರಾಧಿಕಾರವು ಅ. 15ರಂದೇ ತೆಗೆದುಕೊಂಡಿದೆ ಎಂದು ವರದಿಯಾಗಿದೆ.

ಚೀನಾದ ಕೆಲವು ಭಾಗಗಳಲ್ಲಿ ಕೋವಿಡ್‌ ಉಲ್ಬಣಿಸಿದೆ. ಅದನ್ನು ತಡೆಯಲು ಲಾಕ್‌ ಡೌನ್‌ ಕ್ರಮಗಳನ್ನು ಕೈಗೊಳ್ಳಲಾಗಿದೆ. ಶಾಲೆಗಳನ್ನೂ ಮುಚ್ಚಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.