ADVERTISEMENT

ಸಾಯ್, ಮೆಕಾರ್ಥಿ ಸಭೆಗೆ ಚೀನಾ ವಿರೋಧ

ಏಜೆನ್ಸೀಸ್
Published 29 ಮಾರ್ಚ್ 2023, 13:18 IST
Last Updated 29 ಮಾರ್ಚ್ 2023, 13:18 IST
ಸಾಯ್ ಇಂಗ್‌ ವೆನ್‌
ಸಾಯ್ ಇಂಗ್‌ ವೆನ್‌   

ಬೀಜಿಂಗ್‌ (ಎಪಿ): ತೈವಾನ್‌ ಅಧ್ಯಕ್ಷೆ ಸಾಯ್‌ ಇಂಗ್‌ ವೆನ್‌ ಹಾಗೂ ಅಮೆರಿಕ ಸಂಸತ್‌ ಸ್ಪೀಕರ್‌ ಕೆವಿನ್‌ ಮೆಕಾರ್ಥಿ ಅವರ ಉದ್ದೇಶಿತ ಭೇಟಿಯನ್ನು ಚೀನಾ ವಿರೋಧಿಸಿದೆ. ಒಂದು ವೇಳೆ ಇಬ್ಬರು ನಾಯಕರು ಸಭೆ ನಡೆಸಿದ್ದೇ ಆದರೆ, ಅದಕ್ಕೆ ತಕ್ಕ ಉತ್ತರ ನೀಡಲಾಗುವುದು ಎಂದು ಎಚ್ಚರಿಸಿದೆ.

‘ಉಭಯ ದೇಶಗಳ ನಾಯಕರ ಈ ಉದ್ದೇಶಿತ ಸಭೆಯನ್ನು ನಾವು ಖಂಡಿಸುತ್ತೇವೆ. ಈ ಸಭೆ ನಡೆದಲ್ಲಿ, ದಿಟ್ಟ ಪ್ರತ್ಯುತ್ತರ ನೀಡುವುದು ಖಚಿತ’ ಎಂದು ತೈವಾನ್‌ ವ್ಯವಹಾರಗಳಿಗೆ ಸಂಬಂಧಿಸಿದ ವಕ್ತಾರ ಝು ಫೆಂಗ್ಲಿಯನ್‌ ಹೇಳಿದ್ದಾರೆ.

ಸಾಯ್‌ ಅವರು ಏಪ್ರಿಲ್‌ 5ರಂದು ಸಾಯ್‌ ಅವರು ಲಾಸ್‌ ಏಂಜಲೀಸ್‌ನಲ್ಲಿ ಮೆಕಾರ್ಥಿ ಅವರನ್ನು ಭೇಟಿಯಾಗಿ, ದ್ವಿಪಕ್ಷೀಯ ಮಾತುಕತೆ ನಡೆಸುವ ಸಾಧ್ಯತೆ ಇದೆ.

ADVERTISEMENT

ತೈವಾನ್‌ ಮತ್ತು ಚೀನಾ ನಡುವಿನ ಸಂಘರ್ಷ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಅಲ್ಲದೇ, ತೈವಾನ್‌ ಮಿತ್ರ ರಾಷ್ಟ್ರಗಳ ಮೇಲೆ ಒತ್ತಡ ಹೇರುತ್ತಿರುವ ಚೀನಾ, ಆ ರಾಷ್ಟ್ರಗಳು ತೈವಾನ್‌ನೊಂದಿಗಿನ ಸಂಬಂಧ ಕಡಿದುಕೊಳ್ಳುವಂತೆ ಮಾಡುತ್ತಿದೆ. ತನ್ನ ಮಿಲಿಟರಿ ಶಕ್ತಿಯನ್ನು ಪ್ರದರ್ಶಿಸುವ ಮೂಲಕ ದ್ವೀಪರಾಷ್ಟ್ರ ತೈವಾನ್‌ಗೆ ಎಚ್ಚರಿಕೆ ಸಂದೇಶ ರವಾನಿಸುವ ಕೆಲಸವನ್ನೂ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.