ಬಿಜೀಂಗ್: ಕೊರೊನಾ ಸೋಂಕು ಕಾರಣ ಮುಂದೂಡಲಾಗಿದ್ದ ಚೀನಾದ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆಯು ಮಂಗಳವಾರ ಆರಂಭವಾಗಿದೆ.
ಎರಡು ದಿನ ನಡೆಯಲಿರುವ ಈ ಪರೀಕ್ಷೆಯಲ್ಲಿ ಸುಮಾರು 1.1 ಕೋಟಿ ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ.ಕೊರೊನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಸಭೆಗಳಿಗೆ ನಿರ್ಬಂಧ ಹೇರಲಾಗಿತ್ತು. ಈಪರೀಕ್ಷೆಯು ಲಾಕ್‌ಡೌನ್ ತೆರವಿನ ಬಳಿಕ ಚೀನಾದಲ್ಲಿ ನಡೆಯುತ್ತಿರುವ ಮೊದಲ ಮಹತ್ವದ ಸಾರ್ವಜನಿಕ ವಿದ್ಯಮಾನವಾಗಿದೆ.
ಚೀನಾದಲ್ಲಿ ಮಂಗಳವಾರ ಹೊಸದಾಗಿ 8 ಪ್ರಕರಣಗಳು ವರದಿಯಾಗಿದೆ. ಈವರೆಗೆ83,565 ಸೋಂಕಿತರಲ್ಲಿ4,634 ಮಂದಿ ಮೃತಪಟ್ಟಿದ್ಧಾರೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಸಮಿತಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.