ADVERTISEMENT

ಹಲವು ದೇಶಗಳೊಂದಿಗೆ ಚೀನಾ ತಂಟೆ, ತೆರಬೇಕಿದೆ ಭಾರೀ ಬೆಲೆ: ತಜ್ಞರ ಅಭಿಮತ

ಪಿಟಿಐ
Published 27 ಜೂನ್ 2020, 11:19 IST
Last Updated 27 ಜೂನ್ 2020, 11:19 IST
ಭಾರತದ ಪ‍್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್‌ ಮೋರಿಸನ್‌, ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌
ಭಾರತದ ಪ‍್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್‌ ಮೋರಿಸನ್‌, ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌    

ಪೂರ್ವ ಲಡಾಕ್‌ನಲ್ಲಿ ಭಾರತದ ವಿರುದ್ಧ ಆಕ್ರಮಣಕಾರಿ ಮಿಲಿಟರಿ ನಡೆ ಅನುಸರಿಸಿದ ಚೀನಾ ಅದಕ್ಕಾಗಿ ದಶಕಗಳ ಕಾಲ "ಭಾರಿ ಬೆಲೆ" ತೆರಬೇಕಾಗುತ್ತದೆ ಎಂದು ಮಿಲಿಟರಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಭಾರತದೊಂದಿಗೆ ಗಡಿ ವಿವಾದ, ಹಾಂಕಾಂಗ್‌ ರಾಜಕೀಯದಲ್ಲಿ ಮೂಗು ತೂರಿಸುವುದು, ಅಮೆರಿಕ ಮತ್ತು ಆಸ್ಟ್ರೇಲಿಯಾ ಜೊತೆಗಿನ ವಾಣಿಜ್ಯ ಸಮರ, ದಕ್ಷಿಣ ಹಾಗೂ ಪೂರ್ವ ಚೀನಾ ವಿಚಾರವಾಗಿ ಅದು ನಡೆದುಕೊಳ್ಳುತ್ತಿರುವ ರೀತಿಯು ವಿಶ್ವದಲ್ಲಿ ಅದನ್ನು ಒಂಟಿಯನ್ನಾಗಿಸುತ್ತಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಲಡಾಕ್ ಮತ್ತು ದಕ್ಷಿಣ ಚೀನಾದ ವಿಚಾರದಲ್ಲಿ ದುರ್ವರ್ತನೆ ತೋರಿರುವ ಚೀನಾ ಇದಕ್ಕಾಗಿ ಕಳೆದೆರಡು ತಿಂಗಳಿಂದ ಭಾರಿ ದೊಡ್ಡ ಪ್ರಮಾಣದ ಹಣವನ್ನೇ ವ್ಯಯಿಸಿದೆ. ಇಡೀ ಜಗತ್ತೇ ಕೊರೊನಾ ವೈರಸ್‌ ವಿರುದ್ಧ ಹೋರಾಡುತ್ತಿರುವ ಈ ಸಂದರ್ಭದಲ್ಲಿ ಚೀನಾ ತೋರಿದ ಈ ವರ್ತನೆಯು ಬೀಜಿಂಗ್‌ನ ನೈಜ ಮುಖವನ್ನು ಅನಾವರಣ ಮಾಡಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಅಮೆರಿಕದೊಂದಿಗಿನ ವಾಣಿಜ್ಯ ಸಮರ, ವ್ಯಾಪಾರ-ಸಂಬಂಧಿತ ವಿಷಯಗಳೊಂದಿಗೆ ಆಸ್ಟ್ರೇಲಿಯಾದೊಂದಿಗೆ ಹೆಚ್ಚುತ್ತಿರುವ ಜಗಳ ಮತ್ತು ಹಾಂಕಾಂಗ್‌ನಲ್ಲಿ ವಿಚಾರದಲ್ಲಿ ಮೂಗು ತೂರಿಸುವ ಚೀನಾದ ಪ್ರವೃತ್ತಿಯು ಜಾಗತಿಕವಾಗಿ ಅದರ ವರ್ಚಸ್ಸನ್ನು ಕುಗ್ಗಿಸುವಂಥದ್ದು ಎಂದು ತಜ್ಞರು ಉಲ್ಲೇಖಿಸಿದ್ದಾರೆ.

‘ಇಡೀ ಜಗತ್ತು ಕೋವಿಡ್‌–19 ನಿಂದ ತತ್ತರಿಸಿ ಹೋಗಿದೆ. ಹೀಗಿರುವಾಗ ಪೂರ್ವ ಲಡಾಖ್‌ನಲ್ಲಿ ಆಕ್ರಮಣಕಾರಿ ಮಿಲಿಟರಿ ನಡವಳಿಕೆಯನ್ನು ತೋರಿದ ಚೀನಾ ಆ ಮೂಲಕ ತನ್ನನ್ನು ಇಡೀ ವಿಶ್ವದ ಮುಂದೆ ಬಟಾಬಯಲು ಮಾಡಿಕೊಂಡಿದೆ. ಭಾರತೀಯ ಸೈನಿಕರನ್ನು ಕೊಲ್ಲುವ ಮೂಲಕ ಚೀನಾ ಭಾರತ ಮತ್ತು ವಿಶ್ವದ ಕೆಲ ರಾಷ್ಟ್ರಗಳೊಂದಿಗಿನ ತನ್ನ ಮಧುರ ಬಾಂಧವ್ಯವನ್ನು ಕೆಡಿಸಿಕೊಂಡಿದೆ. ಇದು ದುಬಾರಿ. ಇದನ್ನು ಸರಿಪಡಿಸಿಕೊಳ್ಳಲು ಚೀನಾ ದಶಕಗಳ ಕಾಲ ದೊಡ್ಡ ಬೆಲೆ ತೆರಬೇಕಾಗುತ್ತದೆ,’ ಎಂದು ಸೇನಾಯ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮಿತ್ ಸಿಂಗ್ ಹೇಳಿದ್ದಾರೆ.

‘ಚೀನಾದ ಪೀಪಲ್ಸ್‌ ಲಿಬರೇಷನ್‌ ಆರ್ಮಿ –ಪಿಎಲ್‌ಎ’ ಒಂದು ರಾಜಕೀಯ ಶಕ್ತಿಯಾಗಿದ್ದು, ಅದು ಮಿಲಿಟರಿ ತತ್ವಗಳನ್ನು ಪಾಲಿಸುವುದಿಲ್ಲ ಎಂಬುದು ಗಾಲ್ವಾನ್‌ ಕಣಿವೆಯಲ್ಲಿ ನಡೆದ ದಾಳಿಯಿಂದ ಮತ್ತೊಮ್ಮೆ ಬಯಲಾಗಿದೆ ಎಂದಿದ್ದಾರೆ.

‘ಚೀನಾ ತನ್ನ ದುಷ್ಕೃತ್ಯಕ್ಕೆ ಭಾರಿ ಪ್ರಮಾಣದ ಆರ್ಥಿಕ ರೂಪದ ಬೆಲೆ ತೆರಬೇಕಾಗಬಹುದು,’ ಎಂದು ಲೆಫ್ಟಿನೆಂಟ್ ಜನರಲ್ ಶಾ ಅವರು ಅಭಿಪ್ರಾಯಪಟ್ಟಿದ್ದಾರೆ. ಹಾಂಕಾಂಗ್‌ ರಾಜಕೀಯದಲ್ಲಿ ಮೂಗು ತೂರಿಸುತ್ತಿರುವುದು, ದಕ್ಷಿಣ ಚೀನಾ ಮತ್ತು ಪೂರ್ವ ಚೀನಾ ಸಾಗರಕ್ಕೆ ಸಂಬಂಧಿಸಿದಂತೆ ಅದು ಭಾರಿ ಪ್ರಮಾಣದ ಹಣ ಖರ್ಚು ಮಾಡುತ್ತಿದೆ ಎಂದೂ ಅವರು ತಿಳಿಸಿದ್ದಾರೆ.

ಚೀನಾ ಮತ್ತು ಆಸ್ಟ್ರೇಲಿಯಾ ನಡುವಿನ ವ್ಯಾಪಾರ ಯುದ್ಧವನ್ನು ಶಾ ಇದೇ ವೇಳೆ ಉಲ್ಲೇಖಿಸಿದ್ದಾರೆ. ಅಮೆರಿಕದ ವಿರುದ್ಧದ ಚೀನಾದ ವ್ಯಾಪಾರ ಸಮರವು ‘ಅಂತ್ಯ ಕಾಣಿಸುವ ಹೋರಾಟ’ ಎಂದು ಅವರು ವಿಶ್ಲೇಷಿಸಿದರು. ಇದೇ ವೇಳೆ ಚೀನಾ ಆಸ್ಟ್ರೇಲಿಯಾದೊಂದಿಗೂ ಸಂಬಂಧವನ್ನೂ ಹಾಳು ಮಾಡಿಕೊಂಡಿದೆ. ಇದೆಲ್ಲವೂ ಚೀನಾನದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಅವರು ತಿಳಿಸಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.