ADVERTISEMENT

ಚೀನಾ ನಿಯಮಗಳಿಗನುಸಾರ ನಡೆದುಕೊಳ್ಳಬೇಕು: ಜೋ ಬೈಡನ್‌

ವಿಶ್ವ ಆರೋಗ್ಯ ಸಂಸ್ಥೆಗೆ ಮತ್ತೆ ಅಮೆರಿಕ ಸೇರ್ಪಡೆ

ಪಿಟಿಐ
Published 20 ನವೆಂಬರ್ 2020, 9:24 IST
Last Updated 20 ನವೆಂಬರ್ 2020, 9:24 IST
ಜೋ ಬೈಡನ್‌
ಜೋ ಬೈಡನ್‌   

ವಾಷಿಂಗ್ಟನ್‌: ‘ಚೀನಾ ನಿಯಮಗಳಿಗನುಸಾರವಾಗಿ ನಡೆದುಕೊಳ್ಳಬೇಕಾಗಿದೆ’ ಎಂದು ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್‌ ಹೇಳಿದ್ದಾರೆ. ಅಲ್ಲದೆ, ಅಮೆರಿಕವು ವಿಶ್ವ ಆರೋಗ್ಯ ಸಂಸ್ಥೆಯನ್ನು (ಡಬ್ಲ್ಯೂಎಚ್‌ಓ) ಮತ್ತೆ ಸೇರಿಕೊಳ್ಳಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ಘೋಷಿಸಿದ್ದಾರೆ.

‘ಚೀನಾದ ವರ್ತನೆಗಾಗಿ ಅದನ್ನು ಶಿಕ್ಷಿಸಲು ಬಯಸುತ್ತೇನೆ’ ಎಂದು ಜೋ ಬೈಡನ್‌ ಅವರು ಚುನಾವಣೆ ಪ್ರಚಾರದ ಸಂದರ್ಭದಲ್ಲಿ ನಡೆದ ಅಧ್ಯಕ್ಷೀಯ ಸಂವಾದದಲ್ಲಿ ಹೇಳಿದ್ದರು. ಹೀಗಾಗಿ, ಚೀನಾದ ಮೇಲೆ ಆರ್ಥಿಕ ನಿರ್ಬಂಧ ಹೇರುವ ಚಿಂತನೆಯಿದೆಯೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬೈಡನ್‌, ‘ಚೀನಾ ನಿಯಮಗಳಿಗನುಸಾರವಾಗಿ ನಡೆದುಕೊಳ್ಳುತ್ತಿದೆಯೇ ಎಂಬುದನ್ನು ಮೊದಲು ಖಚಿತ ಪಡಿಸಿಕೊಳ್ಳುತ್ತೇನೆ’ ಎಂದಿದ್ದಾರೆ.

‘ಇದು ಕೇವಲ ಚೀನಾವನ್ನು ಶಿಕ್ಷಿಸುವ ವಿಷಯವಲ್ಲ. ಚೀನಾ ನಿಯಮಗಳಿಗನುಸಾರವಾಗಿ ನಡೆದುಕೊಳ್ಳಬೇಕು. ಇದನ್ನು ಚೀನಾಗೆ ತಿಳಿಯಪಡಿಸಬೇಕಾಗಿದೆ . ಡಬ್ಲ್ಯೂಎಚ್‌ಓನಲ್ಲಿ ಪುನಃ ಸೇರಿಕೊಳ್ಳಲು ಇದು ಕೂಡ ಒಂದು ಪ್ರಮುಖ ಕಾರಣ’ ಎಂದು ಅವರು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

‘ನಾವು ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಮತ್ತೆ ಸೇರಲಿದ್ದೇವೆ. ಇದಕ್ಕಾಗಿ ಕೆಲವೊಂದು ಸುಧಾರಣೆ, ಅಂಗೀಕಾರಗಳು ಆಗಬೇಕಾಗಿದೆ. ನಾವು ಪ್ಯಾರಿಸ್‌ ಹವಾಮಾನ ಒಪ್ಪಂದಲ್ಲೂ ಭಾಗಿಯಾಗಲಿದ್ದೇವೆ. ಎಲ್ಲ ರಾಷ್ಟ್ರಗಳು ಒಗ್ಗೂಡಬೇಕು. ಚೀನಾಗೆ ಅದರ ವರ್ತನೆ ಬಗ್ಗೆ ತಿಳಿ ಹೇಳಬೇಕು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.