ADVERTISEMENT

ಕೋವಿಡ್‌ ಉಲ್ಬಣ: ಚೀನಾದ ಷಿಯಾನ್‌ ನಗರದಲ್ಲಿ ಅಂತರರಾಷ್ಟ್ರೀಯ ವಿಮಾನ ಸಂಚಾರ ಸ್ಥಗಿತ

ಪಿಟಿಐ
Published 6 ಜನವರಿ 2022, 13:41 IST
Last Updated 6 ಜನವರಿ 2022, 13:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೀಜಿಂಗ್‌: ಚೀನಾದ ಪ್ರಸಿದ್ಧ ಪ್ರವಾಸಿ ನಗರ ಷಿಯಾನ್‌ನಲ್ಲಿ ಕೋವಿಡ್‌–19 ಉಲ್ಬಣಗೊಂಡಿದ್ದು, ಅಂತರರಾಷ್ಟ್ರೀಯ ‍ವಿಮಾನ ಸಂಚಾರವನ್ನು ರದ್ದುಗೊಳಿಸಲಾಗಿದೆ.

‘ಈಗಾಗಲೇ ಷಿಯಾನ್‌ ನಗರವು ದೇಶಿಯ ವಿಮಾನ ಸಂಚಾರವನ್ನು ರದ್ದುಗೊಳಿಸಿತ್ತು. ಡಿಸೆಂಬರ್‌ ಪ್ರಾರಂಭದಿಂದ ಲಾಕ್‌ಡೌನ್‌ ಅನ್ನು ಹೇರಿತ್ತು. ಇದೀಗ ಬುಧವಾರದಿಂದ ಜಾರಿಗೆ ಬರುವಂತೆ ಅಂತರರಾಷ್ಟ್ರೀಯ ವಿಮಾನ ಸಂಚಾರವನ್ನೂ ರದ್ದುಗೊಳಿಸಲಾಗಿದೆ’ ಎಂದು ಷಿಯಾನ್‌ ಷಿಯನ್ಯಾಂಗ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಿಳಿಸಿದೆ.

ಷಿಯಾನ್‌,36 ದೇಶಗಳಲ್ಲಿ 74 ಪ್ರಮುಖ ಸ್ಥಳಗಳನ್ನು ಸಂಪರ್ಕಿಸುವ ಅಂತರರಾಷ್ಟ್ರೀಯ ಮಾರ್ಗಗಳನ್ನು ಹೊಂದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.