ADVERTISEMENT

ಅಣ್ವಸ್ತ್ರ ಘಟಕದ ಕಲುಷಿತ ನೀರು ಪೆಸಿಫಿಕ್ ಸಾಗರಕ್ಕೆ: ಜಪಾನ್ ವಿರುದ್ಧ ಚೀನಾ ಕಿಡಿ

ರಾಯಿಟರ್ಸ್‌
Published 24 ಆಗಸ್ಟ್ 2023, 7:23 IST
Last Updated 24 ಆಗಸ್ಟ್ 2023, 7:23 IST
   

ಬೀಜಿಂಗ್‌: ಫುಕುಶಿಮಾ ಅಣ್ವಸ್ತ್ರ ಘಟಕದ ಕಲುಷಿತ ನೀರನ್ನು ಪೆಸಿಫಿಕ್‌ ಸಾಗರಕ್ಕೆ ಬಿಡುಗಡೆ ಮಾಡಿರುವ ಜಪಾನ್‌ ನಡೆಯನ್ನು ಚೀನಾ ಬಲವಾಗಿ ಖಂಡಿಸಿದೆ.

ಕಲುಷಿತ ನೀರನ್ನು ಸಾಗರಕ್ಕೆ ಹರಿಸುತ್ತಿರುವುದು ಜಪಾನ್‌ಗೆ ಮಾತ್ರವೇ ಸಂಬಂಧಿಸಿದ ವಿಚಾರವಲ್ಲ. ಅಣ್ವಸ್ತ್ರ ಸುರಕ್ಷತೆಯ ಕುರಿತ ಗಡಿಯಾಚೆಗಿನ ಬಹುದೊಡ್ಡ ಸಮಸ್ಯೆಯಾಗಿದೆ ಎಂದು ಚೀನಾ ವಿದೇಶಾಂಗ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದೆ.

ಫುಕುಶಿಮಾ ಘಟಕದ ಕಲುಷಿತ ನೀರನ್ನು ಇಂದು (ಗುರುವಾರ) ಬೆಳಗ್ಗೆಯಿಂದ ಹರಿಬಿಡಲಾಗುತ್ತಿದೆ. ಸುರಕ್ಷಿತ ಮಾನದಂಡಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ ಹೇಳಿದೆ. ಆದಾಗ್ಯೂ,  ಇದು ಜಪಾನ್‌ನ ಅತ್ಯಂತ ಸ್ವಾರ್ಥ ಮತ್ತು ಬೇಜವಾಬ್ದಾರಿಯ ನಡೆ ಎಂದು ಚೀನಾ ಕಿಡಿಕಾರಿದೆ.

ADVERTISEMENT

ಅಷ್ಟಲ್ಲದೆ, ಜಪಾನ್‌ 10 ಪ್ರಾಂತ್ಯಗಳಿಂದ ಆಹಾರ ಪದಾರ್ಥಗಳನ್ನು ಆಮದು ಮಾಡಿಕೊಳ್ಳುವುದನ್ನು ನಿರ್ಬಂಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.