ADVERTISEMENT

ಸೌದಿ ಅರೇಬಿಯಾಕ್ಕೆ ಚೀನಾ ಅಧ್ಯಕ್ಷ ಷಿ ಭೇಟಿ

ಏಜೆನ್ಸೀಸ್
Published 7 ಡಿಸೆಂಬರ್ 2022, 13:28 IST
Last Updated 7 ಡಿಸೆಂಬರ್ 2022, 13:28 IST
ಕ್ಸಿ ಜಿನ್‌ಪಿಂಗ್ 
ಕ್ಸಿ ಜಿನ್‌ಪಿಂಗ್    

ಬೀಜಿಂಗ್: ಕೋವಿಡ್‌– 19 ಕಟ್ಟುನಿಟ್ಟಾದ ಕ್ರಮಗಳ ನಡುವೆಯೇ ಆರ್ಥಿಕ ಪ್ರಗತಿಯನ್ನು ಸಾಧಿಸಲು ಯತ್ನಿಸುತ್ತಿರುವ ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು, ಇದೇ ವಾರ ಸೌದಿ ಅರೇಬಿಯಾದಲ್ಲಿ ನಡೆಯಲಿರುವ ಪ್ರಾದೇಶಿಕ ಶೃಂಗಸಭೆಗಳಲ್ಲಿ ಭಾಗವಹಿಸಲಿದ್ದಾರೆ.

ಸೌದಿಯ ರಾಜಧಾನಿ ರಿಯಾದ್‌ನಲ್ಲಿ ಚೀನಾ- ಅರಬ್ ಶೃಂಗಸಭೆಯಲ್ಲಿ ಪಾಲ್ಗೊಳ್ಳುವರು. ಕೊಲ್ಲಿ ಸಹಕಾರ ಮಂಡಳಿಯ ಆರು ಸದಸ್ಯ ರಾಷ್ಟ್ರಗಳ ನಾಯಕರೊಂದಿಗೆ ಅವರು ಸಭೆ ನಡೆಸುವರು ಎಂದು ವಿದೇಶಾಂಗ ಸಚಿವಾಲಯವು ಬುಧವಾರ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT