ADVERTISEMENT

ರಾಣಿ 2ನೇ ಎಲಿಜಬೆತ್‌ ಅಂತಿಮ ದರ್ಶನ: ಚೀನಾ ನಿಯೋಗಕ್ಕೆ ಅನುಮತಿ ನಿರಾಕರಣೆ

ಪಿಟಿಐ
Published 16 ಸೆಪ್ಟೆಂಬರ್ 2022, 11:12 IST
Last Updated 16 ಸೆಪ್ಟೆಂಬರ್ 2022, 11:12 IST
ಲಂಡನ್‌ನ ವೆಸ್ಟ್ ಮಿನ್‌ಸ್ಟರ್ ಹಾಲ್‌ನಲ್ಲಿ ಇಡಲಾಗಿರುವ ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಅವರ ಪಾರ್ಥಿವ ಶರೀರಕ್ಕೆ ಶುಕ್ರವಾರ ಬ್ರಿಟನ್‌ನ ಸಂಸದರು ಅಂತಿಮ ನಮನ ಸಲ್ಲಿಸಿದರು –ಎಎಫ್‌ಪಿ ಚಿತ್ರ 
ಲಂಡನ್‌ನ ವೆಸ್ಟ್ ಮಿನ್‌ಸ್ಟರ್ ಹಾಲ್‌ನಲ್ಲಿ ಇಡಲಾಗಿರುವ ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಅವರ ಪಾರ್ಥಿವ ಶರೀರಕ್ಕೆ ಶುಕ್ರವಾರ ಬ್ರಿಟನ್‌ನ ಸಂಸದರು ಅಂತಿಮ ನಮನ ಸಲ್ಲಿಸಿದರು –ಎಎಫ್‌ಪಿ ಚಿತ್ರ    

ಲಂಡನ್: ಇದೇ 19ರಂದು ಲಂಡನ್‌ನ ವೆಸ್ಟ್ ಮಿನ್‌ಸ್ಟರ್‌ ಅಬೆಯಲ್ಲಿ ನಡೆಯಲಿರುವ ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಅವರ ಅಂತ್ಯಕ್ರಿಯೆಗೂ ಮುನ್ನ ಸಂಸತ್ತಿನ ಸಂಕೀರ್ಣದೊಳಗೆ ರಾಣಿಗೆ ಅಂತಿಮ ನಮನ ವಿಧಿಯಲ್ಲಿ ಪಾಲ್ಗೊಳ್ಳಲು ಚೀನಾದ ಉನ್ನತ ಮಟ್ಟದ ನಿಯೋಗಕ್ಕೆ ಬ್ರಿಟನ್ ಅನುಮತಿ ನಿರಾಕರಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ಶುಕ್ರವಾರ ವರದಿ ಮಾಡಿವೆ.

ಕ್ಸಿನ್‌ಜಿಯಾಂಗ್‌ನಲ್ಲಿರುವಉಯಿಘರ್ ಮುಸ್ಲಿಮರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ ಎಂಬುದಾಗಿ ಆರೋಪಿಸಿದ್ದ ಬ್ರಿಟನ್‌ನ ಐವರು ಸಂಸದರ ಮೇಲೆ ಚೀನಾ ನಿರ್ಬಂಧ ಹೇರಿತ್ತು. ಇದೇ ಕಾರಣಕ್ಕಾಗಿ ಹೌಸ್ ಆಫ್ ಕಾಮನ್ಸ್‌ನ ಸ್ಪೀಕರ್ ಸರ್ ಲಿಂಡ್ಸೆ ಹೊಯ್ಲ್ ಅವರು ಚೀನಾದ ನಿಯೋಗಕ್ಕೆ ಅನುಮತಿ ನಿರಾಕರಿಸಿದ್ದಾರೆ ಎನ್ನಲಾಗಿದೆ.

ಭದ್ರತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿರುವ ಹೌಸ್ ಆಫ್ ಕಾಮನ್ಸ್, ಚೀನಾವು ರಾಣಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿದೆ ಎಂದಿದೆ ಎಂಬುದಾಗಿಯೂ ಮಾಧ್ಯಮಗಳು ವರದಿ ಮಾಡಿವೆ.

ADVERTISEMENT

ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರಿಗೆ ಆಹ್ವಾನ ನೀಡಲಾಗಿದೆ. ಆದರೆ, ಅವರ ಬದಲಿಗೆ ಚೀನಾದ ನಿಯೋಗದೊಂದಿಗೆ ಉಪಾಧ್ಯಕ್ಷ ವಾಂಗ್ ಕ್ವಿಶನ್ ಭಾಗವಹಿಸುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.