ADVERTISEMENT

ಚೀನಾ: ಸತತ 2ನೇ ದಿನ ತೈವಾನ್‌ನತ್ತ ಹಾರಿದ ಸೇನಾ ವಿಮಾನಗಳು

ಏಜೆನ್ಸೀಸ್
Published 3 ಅಕ್ಟೋಬರ್ 2021, 8:07 IST
Last Updated 3 ಅಕ್ಟೋಬರ್ 2021, 8:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತೈಪೆ: ಸತತ ಎರಡನೇ ದಿನವೂ ಚೀನಾ ತೈವಾನ್‌ನತ್ತ ತನ್ನ 30 ಸೇನಾ ವಿಮಾನಗಳನ್ನು ಕಳುಹಿಸಿದೆ.

ಹಲವು ದಿನಗಳ ನಂತರ ಇದು ಚೀನಾದ ದೊಡ್ಡ ಸೇನಾ ಪ್ರದರ್ಶನವಾಗಿದೆ.

ಹಗಲು ಮತ್ತು ರಾತ್ರಿ ವೇಳೆ 39 ವಿಮಾನಗಳು ತೈವಾನ್‌ನ ವಾಯು ರಕ್ಷಣಾ ವಲಯವನ್ನು ಪ್ರವೇಶಿಸಿವೆ ಎಂದು ತೈವಾನ್‌ ರಕ್ಷಣಾ ಸಚಿವಾಲಯ ಹೇಳಿದೆ.

ADVERTISEMENT

ಪೂರ್ವ ಕರಾವಳಿಯಲ್ಲಿರುವ ತೈವಾನ್‌ ಅನ್ನು ತನ್ನ ಪ್ರದೇಶವೆಂದು ಚೀನಾ ಹೇಳಿಕೊಂಡಿದೆ. 1949ರ ಆಂತರಿಕ ಯುದ್ಧದ ಸಂದರ್ಭದಲ್ಲಿ ಚೀನಾ ಮತ್ತು ತೈವಾನ್‌ ಬೇರ್ಪಟ್ಟವು. ಕಮ್ಯುನಿಸ್ಟರು ಚೀನಾವನ್ನು ನಿಯಂತ್ರಿಸಿದರೆ ಪ್ರತಿಸ್ಪರ್ಧಿಗಳಾದ ರಾಷ್ಟ್ರೀಯವಾದಿಗಳು ತೈವಾನ್‌ ಭೂಭಾಗದಲ್ಲಿ ಸರ್ಕಾರ ರಚಿಸಿದರು. ಚೀನಾದಲ್ಲಿ ಕಮ್ಯುನಿಸ್ಟ್‌ ಪಕ್ಷವು ಶುಕ್ರವಾರ ತನ್ನ ಆಡಳಿತದ 72 ನೇ ವಾರ್ಷಿಕೋತ್ಸವ ಆಚರಿಸಿತು.

‘ಪ್ರಾದೇಶಿಕ ಶಾಂತಿಗೆ ಧಕ್ಕೆ ತರಲು ಚೀನಾ ಯಾವಾಗಲೂ ಕ್ರೂರ ಮತ್ತು ಅನಾಗರಿಕ ಕ್ರಮಗಳನ್ನು ಅನುಸರಿಸುತ್ತಿದೆ’ ಎಂದು ದಕ್ಷಿಣ ತೈವಾನ್‌ನಲ್ಲಿ ಶನಿವಾರ ವಿಜ್ಞಾನ ಉದ್ಯಾನವನದ ಉದ್ಘಾಟನಾ ಸಮಾರಂಭದಲ್ಲಿ ತೈವಾನ್‌ ಪ್ರಧಾನಿ ಸು ತ್ಸೆಂಗ್–ಚಾಂಗ್‌ ಚೀನಾ ವಿಮಾನ ಹಾರಾಟದ ಬಗ್ಗೆ ಕಿಡಿಕಾರಿದ್ದರು.

ಶನಿವಾರ ಹಗಲು ವೇಳೆ 20 ವಿಮಾನಗಳು ಮತ್ತು ರಾತ್ರಿ ವೇಳೆ 19 ವಿಮಾನಗಳು ಹಾರಾಡಿವೆ. ಇವುಗಳಲ್ಲಿ ಹೆಚ್ಚಿನವು ಜೆ–17 ಮತ್ತು ಎಸ್‌ಯು–30 ಫೈಟರ್‌ ಜೆಟ್‌ಗಳಾಗಿವೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

ಚೀನಾ ಒಂದು ವರ್ಷಕ್ಕಿಂತ ಹೆಚ್ಚು ಕಾಲದಿಂದ ತೈವಾನ್‌ನ ದಕ್ಷಿಣ ಭಾಗಕ್ಕೆ ಸೇನಾ ವಿಮಾನಗಳನ್ನು ಕಳುಹಿಸುತ್ತಿದೆ ಎಂದು ತೈವಾನ್‌ನ ಕೇಂದ್ರ ಸುದ್ದಿ ಸಂಸ್ಥೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.