ADVERTISEMENT

ವಿಮಾನ ಪತನ: ಇಬ್ಬರು ಮಕ್ಕಳೊಡನೆ ಪ್ರಾಣ ಬಿಟ್ಟ ನಟ ಕ್ರಿಸ್ಟಿಯನ್ ಆಲಿವರ್

ಹಾಲಿವುಡ್‌ನ ಖ್ಯಾತ ನಟ ಕ್ರಿಸ್ಟಿಯನ್ ಆಲಿವರ್

ಏಜೆನ್ಸೀಸ್
Published 6 ಜನವರಿ 2024, 10:04 IST
Last Updated 6 ಜನವರಿ 2024, 10:04 IST
<div class="paragraphs"><p>ಕ್ರಿಸ್ಟಿಯನ್ ಆಲಿವರ್</p></div>

ಕ್ರಿಸ್ಟಿಯನ್ ಆಲಿವರ್

   

ಇನ್‌ಸ್ಟಾಗ್ರಾಂ ಫೋಟೊ

ನ್ಯೂಯಾರ್ಕ್: ಶುಕ್ರವಾರ ಕೆರೆಬಿಯನ್ ದ್ವೀಪದಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಹಾಲಿವುಡ್‌ನ ಖ್ಯಾತ ನಟ ಕ್ರಿಸ್ಟಿಯನ್ ಆಲಿವರ್ (54) (Christian Oliver Klepser) ಹಾಗೂ ಅವರ ಇಬ್ಬರು ಹೆಣ್ಣು ಮಕ್ಕಳು ಮೃತರಾಗಿದ್ದಾರೆ.

ADVERTISEMENT

ಆಲಿವರ್ ಅವರು ಕೆರೆಬಿಯನ್ ದ್ವೀಪ ಪ್ರದೇಶವಾದ Bequiaದಿಂದ ಸಣ್ಣ ವಿಮಾನದಲ್ಲಿ ಮಕ್ಕಳೊಡನೆ ಯಾನ ಹೊರಟಿದ್ದರು. ಈ ವೇಳೆ Saint Vincent and the Grenadines ಎಂಬ ದ್ವೀಪ ಪ್ರದೇಶದ ಸಮುದ್ರದಲ್ಲಿ ವಿಮಾನ ಪತನವಾಗಿದೆ. ಘಟನೆಯಲ್ಲಿ ಪೈಲಟ್ ಕೂಡ ಮೃತರಾಗಿದ್ದಾರೆ.

ಮೃತರನ್ನು ಆಲಿವರ್ ಅವರ ಪುತ್ರಿಯರಾದ ಆನ್ನಿಕ್ ಲೆಪ್ಸರ್ (12) ಮಾಡಿಟಾ ಲೆಪ್ಸರ್ (10) ಪೈಲಟ್ ರಾಬರ್ಟ್ ಸ್ಯಾಚಸ್ಸ್ ಎಂದು ಗುರುತಿಸಲಾಗಿದೆ.

ದುರಂತದ ಸುದ್ದಿ ತಿಳಿದು ಸ್ಥಳಕ್ಕೆ ಹೋಗಿ ನೌಕಾದಳದ ಸಹಾಯದಿಂದ ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು Saint Vincent ಪೊಲೀಸರು ತಿಳಿಸಿದ್ದಾರೆ.

ಈ ಲಘು ವಿಮಾನ ಜೆಎಫ್ ಮಿಚೆಲ್ ವಿಮಾನ ನಿಲ್ದಾಣದಿಂದ ಹೊರಟಿತ್ತು. ಪತನಕ್ಕೆ ಕಾರಣ ತಕ್ಷಣಕ್ಕೆ ತಿಳಿದು ಬಂದಿಲ್ಲ. ತನಿಖೆ ಕೈಗೆತ್ತಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಜರ್ಮನಿ ಮೂಲದ ಆಲಿವರ್ ಅವರು ಹಾಲಿವುಡ್‌ನ ‘ಸ್ಪೀಡ್ ರೇಸರ್’, ‘ದಿ ಗುಡ್ ಜರ್ಮನ್’, ‘ಜಿಪ್ಪರ್’, ‘ಇಂಡಿಯಾನ ಜೋನಸ್’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು. ‘ಸೇವ್ಡ್ ಬೈ ದಿ ಬೆಲ್’, ‘ದಿ ನ್ಯೂ ಕ್ಲಾಸ್’ ಎಂಬ ಟೆಲಿವಿಷನ್ ಸಿರೀಸ್‌ಗಳಲ್ಲಿ ಅಭಿನಯಿಸಿ ಮಿಂಚಿದ್ದರು. 35ಕ್ಕೂ ಹೆಚ್ಚು ಸಿನಿಮಾ, ಟಿವಿ ಸಿರೀಸ್‌ಗಳಿಗೆ ಅವರು ಬಣ್ಣ ಹಚ್ಚಿದ್ದರು.

ಅವರ ಅಭಿನಯದ Forever Hold Your Peace ಸಿನಿಮಾ ಇನ್ನೇನು ಬಿಡುಗಡೆಯಾಗಬೇಕಿದೆ.  ಆಲಿವರ್ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.