ADVERTISEMENT

ತೆರಿಗೆ ವಂಚನೆ ಆರೋಪ: ಡೊನಾಲ್ಡ್ ಟ್ರಂಪ್ ಕಂಪನಿ ಸಿಎಫ್‌ಒ ವಿರುದ್ಧ ದೋಷಾರೋಪ

ರಾಯಿಟರ್ಸ್
Published 2 ಜುಲೈ 2021, 5:20 IST
Last Updated 2 ಜುಲೈ 2021, 5:20 IST
ಡೊನಾಲ್ಡ್ ಟ್ರಂಪ್ (ರಾಯಿಟರ್ಸ್ ಚಿತ್ರ)
ಡೊನಾಲ್ಡ್ ಟ್ರಂಪ್ (ರಾಯಿಟರ್ಸ್ ಚಿತ್ರ)   

ವಾಷಿಂಗ್ಟನ್: ತೆರಿಗೆ ವಂಚನೆ ‍ಪ್ರಕರಣಕ್ಕೆ ಸಂಬಂಧಿಸಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಡೆತನದ ಕಂಪನಿ ಮತ್ತು ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ಅಲೆನ್ ವೈಸೆಲ್‌ಬರ್ಗ್ ವಿರುದ್ಧ ದೋಷಾರೋಪ ಹೊರಿಸಲಾಗಿದೆ.

ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಿದ್ದಾಗ ಅಲೆನ್ ವೈಸೆಲ್‌ಬರ್ಗ್ ಕಂಪನಿಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು.

ತೆರಿಗೆ ರಹಿತ ಪಾರ್ಟ್‌ಮೆಂಟ್‌ಗಳ ಬಳಕೆ, ವೈಸೆಲ್‌ಬರ್ಗ್ ಮತ್ತು ಇತರ ಅಧಿಕಾರಿಗಳಿಗೆ ಗುತ್ತಿಗೆ ಆಧಾರದಲ್ಲಿ ಪಡೆದ ಕಾರುಗಳ ತೆರಿಗೆ ಮಾಹಿತಿ ಸಲ್ಲಿಸದೇ ಇರುವ ಆಧಾರದಲ್ಲಿ ದೋಷಾರೋಪ ಹೊರಿಸಲಾಗಿದೆ.

ADVERTISEMENT

ಶಾಲಾ ಶುಲ್ಕ ಪರಿಹಾರ ಸೇರಿದಂತೆ ವೈಸೆಲ್‌ಬರ್ಗ್ ಅವರು 17.6 ಲಕ್ಷ ಡಾಲರ್ ಪ್ರಯೋಜನ ಪಡೆದಿದ್ದಾರೆ. ಈ ಬಗ್ಗೆ ಆದಾಯ ತೆರಿಗೆ ಅಧಿಕಾರಿಗಳಿಗೆ ಮಾಹಿತಿ ನೀಡಿಲ್ಲ. ಅಲ್ಲದೆ, ನ್ಯೂಯಾರ್ಕ್‌ ನಗರದಲ್ಲಿ ಹೊಂದಿರುವ ನಿವಾಸದ ಮಾಹಿತಿ ಬಹಿರಂಗಪಡಿಸಿಲ್ಲ. 9 ಲಕ್ಷ ಡಾಲರ್ ತೆರಿಗೆ ವಂಚಿಸಿದ್ದಾರೆ ಎಂದು ಸರ್ಕಾರಿ ವಕೀಲರು ಆರೋಪಿಸಿದ್ದಾರೆ.

ಸದ್ಯ ಪ್ರಕರಣಕ್ಕೆ ಸಂಬಂಧಿಸಿ ನ್ಯೂಯಾರ್ಕ್‌ ಅಟಾರ್ನಿ ಜನರಲ್ ಲೆಟಿಟಿಯಾ ಜೇಮ್ಸ್ ತನಿಖೆ ನಡೆಸುತ್ತಿದ್ದಾರೆ.

ಆದರೆ, ಕಂಪನಿ ವಿರುದ್ಧದ ಆರೋಪಗಳನ್ನು ಟ್ರಂಪ್ ನಿರಾಕರಿಸಿದ್ದಾರೆ. ರಾಜಕೀಯ ಪ್ರೇರಿತವಾಗಿ ಆರೋಪ ಮಾಡಲಾಗುತ್ತಿದೆ ಎಂದು ಅವರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.