ADVERTISEMENT

ಟ್ರಂಪ್‌ ‘ಸುಂಕ’ ಬೆದರಿಕೆಗೆ ಬೆಚ್ಚಿದ ಕೊಲಂಬಿಯಾ: ವಲಸಿಗರ ವಾಪಸಾತಿಗೆ ಒಪ್ಪಿಗೆ

ರಾಯಿಟರ್ಸ್
Published 27 ಜನವರಿ 2025, 10:57 IST
Last Updated 27 ಜನವರಿ 2025, 10:57 IST
<div class="paragraphs"><p>ಗುಸ್ಟಾವೊ ಪೆಟ್ರೋ ಮತ್ತು ಡೊನಾಲ್ಡ್ ಟ್ರಂಪ್‌</p></div>

ಗುಸ್ಟಾವೊ ಪೆಟ್ರೋ ಮತ್ತು ಡೊನಾಲ್ಡ್ ಟ್ರಂಪ್‌

   

ವಾಷಿಂಗ್ಟನ್‌: ಅಮೆರಿಕದಿಂದ ಗಡೀಪಾರಾದ ತನ್ನ ಪ್ರಜೆಗಳನ್ನು ಸ್ವೀಕರಿಸಲು ಕೊಲಂಬಿಯಾ ಒಪ್ಪಿಗೆ ಸೂಚಿಸಿದ್ದು, ಅಮೆರಿಕದ ಮತ್ತು ಕೊಲಂಬಿಯಾ ನಡುವೆ ಉದ್ಭವಿಸಿದ್ದ ‘ವ್ಯಾಪಾರ ಯುದ್ಧ’ ಸದ್ಯಕ್ಕೆ ತಣ್ಣಗಾಗಿದೆ.

ಅಕ್ರಮ ವಲಸೆ ನಿಗ್ರಹದ ಭಾಗವಾಗಿ ದಾಖಲೆಯಿಲ್ಲದೆ ಅಮೆರಿಕದಲ್ಲಿ ನೆಲಸಿರುವ ಕೊಲಂಬಿಯಾ ನಾಗರಿಕರನ್ನು ಮಿಲಿಟರಿ ವಿಮಾನದ ಮೂಲಕ ಅವರ ದೇಶಕ್ಕೆ ಕಳುಹಿಸಲು ಟ್ರಂಪ್ ಆಡಳಿತ ನಿರ್ಧರಿಸಿದ್ದು, ಇದಕ್ಕೆ ಕೊಲಂಬಿಯಾ ಅಧ್ಯಕ್ಷ ಗುಸ್ಟಾವೊ ಪೆಟ್ರೋ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೇ ವಲಸಿಗರನ್ನು ಹೊತ್ತುತರುವ ಮಿಲಿಟರಿ ವಿಮಾನದ ಲ್ಯಾಂಡಿಂಗ್‌ಗೆ ಅನುಮತಿಸುವುದಿಲ್ಲ ಎಂದೂ ಹೇಳಿದ್ದರು.

ADVERTISEMENT

ವಲಸಿಗರನ್ನು ಸ್ವೀಕರಿಸದೇ ಹೋದಲ್ಲಿ ಇದಕ್ಕೆ ಪ್ರತೀಕಾರವಾಗಿ ಕೊಲಂಬಿಯಾದ ಮೇಲೆ ಹೆಚ್ಚುವರಿ ಸುಂಕ ಮತ್ತು ನಿಷೇಧ ಹೇರುವುದಾಗಿ ಟ್ರಂಪ್‌ ಬೆದರಿಕೆ ಒಡ್ಡಿದ್ದರು.

ಕೊನೆಗೂ ಟ್ರಂಪ್ ಬೆದರಿಕೆಗೆ ತಲೆಬಾಗಿರುವ ಕೊಲಂಬಿಯಾ ವಿಮಾನ ಲ್ಯಾಂಡಿಂಗ್‌ಗೆ ಅನುಮತಿ ನೀಡುವುದಾಗಿ ತಿಳಿಸಿದೆ.

‘ಕೊಲಂಬಿಯಾದ ಎಲ್ಲ ಅಕ್ರಮ ವಲಸಿಗರನ್ನು ಸ್ವೀಕರಿಸುವುದು ಸೇರಿದಂತೆ ಟ್ರಂಪ್ ಅವರ ಎಲ್ಲಾ ಷರತ್ತುಗಳಿಗೆ ಕೊಲಂಬಿಯಾ ಸರ್ಕಾರವು ಒಪ್ಪಿಗೆ ಸೂಚಿಸಿದೆ. ಹೀಗಾಗಿ ಕೊಲಂಬಿಯಾದ ಮೇಲೆ ನಿಷೇಧ ಹೇರುವುದನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ’ ಎಂದು ಭಾನುವಾರ ತಡರಾತ್ರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

‘ಅಮೆರಿಕದಲ್ಲಿ ಕಾನೂನುಬಾಹಿರವಾಗಿ ನೆಲೆಸಿರುವ ತಮ್ಮ ನಾಗರಿಕರನ್ನು ಸ್ವೀಕರಿಸಲು ಎಲ್ಲಾ ರಾಷ್ಟ್ರಗಳು ಸಹಕರಿಸಬೇಕು’ ಎಂದು ಶ್ವೇತಭವನದ ಹೇಳಿಕೆಯು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.