ADVERTISEMENT

ಸೋಂಕು ವ್ಯಾಪಕ | ವಿಶ್ವದಲ್ಲಿ ಕೋಟಿ ಮೀರಿದ ‘ಕೋವಿಡ್’’

​ಪ್ರಜಾವಾಣಿ ವಾರ್ತೆ
Published 28 ಜೂನ್ 2020, 19:31 IST
Last Updated 28 ಜೂನ್ 2020, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
""

ವಿಶ್ವದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಜೂನ್ 28ರ ಅಂತ್ಯದ ವೇಳೆಗೆ 1.01 ಕೋಟಿ ಮುಟ್ಟಿದೆ. ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ.

1,000 ಕೋವಿಡ್ ಪ್ರಕರಣಗಳ ಸಂಖ್ಯೆ 10 ಲಕ್ಷ ಆಗಲು 73 ದಿನ ತೆಗೆದುಕೊಂಡಿತ್ತು. ಈಗ ಈ ಅವಧಿ 10 ಪಟ್ಟು ಇಳಿಕೆ ಆಗಿದೆ. ಪ್ರಕರಣಗಳ ಸಂಖ್ಯೆ 90 ಲಕ್ಷದಿಂದ 1 ಕೋಟಿ ಆಗಲು ಬೇಕಾದದ್ದು ಕೇವಲ 7 ದಿನ. ಸೋಂಕು ವ್ಯಾಪಕವಾಗಿ ಹರಡುತ್ತಿರುವ ಕಾರಣ ವಿಶ್ವದಾದ್ಯಂತ ಮತ್ತಷ್ಟು ಜನರಿಗೆ ಕೋವಿಡ್‌ ತಗಲುವ ಅಪಾಯವಿದೆ.

ಕಡಿಮೆ ಜನರಿಗೆ ಸೋಂಕು ತಗುಲಿರುವ ದೇಶಗಳಲ್ಲಿ ಗುಣಮುಖರಾಗುತ್ತಿರುವವರ ಪ್ರಮಾಣ ಹೆಚ್ಚು. ಆದರೆ, ಅತಿಹೆಚ್ಚು ಪ್ರಕರಣಗಳು
ದಾಖಲಾಗಿರುವ ದೇಶಗಳಲ್ಲಿ ಗುಣಮುಖರ ಪ್ರಮಾಣ ಕಡಿಮೆ ಇದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.