ADVERTISEMENT

Covid-19 World Update: ವಿಶ್ವದಾದ್ಯಂತ 2.12 ಕೋಟಿಗೂ ಅಧಿಕ ಸಕ್ರಿಯ ಪ್ರಕರಣ

ಏಜೆನ್ಸೀಸ್
Published 20 ಡಿಸೆಂಬರ್ 2020, 16:39 IST
Last Updated 20 ಡಿಸೆಂಬರ್ 2020, 16:39 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್: ವಿಶ್ವದಾದ್ಯಂತ ಕೊರೊನಾ ವೈರಸ್ ಸೋಂಕು ತಗುಲಿರುವವರ ಸಂಖ್ಯೆ ಭಾನುವಾರ ರಾತ್ರಿ ವೇಳೆಗೆ 7.68 ಕೋಟಿ ದಾಟಿದೆ.

ವರ್ಲ್ಡೊ ಮೀಟರ್ ವೆಬ್‌ಸೈಟ್ ಅಂಕಿಂಶ ಪ್ರಕಾರ, ಜಗತ್ತಿನಾದ್ಯಂತ ಈವರೆಗೆ ಕೊರೊನಾದಿಂದಾಗಿ 16.95 ಲಕ್ಷಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. 5.39 ಕೋಟಿಗೂ ಹೆಚ್ಚು ಸೋಂಕಿತರು ಗುಣಮುಖರಾಗಿದ್ದಾರೆ.

ಸೋಂಕು ಪ್ರಕರಣಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ 1.80 ಕೋಟಿಗೂ ಅಧಿಕ ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದರೆ, ಭಾರತದಲ್ಲಿ 1 ಕೋಟಿ, ಬ್ರೆಜಿಲ್‌ನಲ್ಲಿ 72.13 ಲಕ್ಷ, ರಷ್ಯಾದಲ್ಲಿ 28.48 ಲಕ್ಷ ಮತ್ತು ಫ್ರಾನ್ಸ್‌ನಲ್ಲಿ 24.60 ಲಕ್ಷಕ್ಕೂ ಅಧಿಕ ಜನರಿಗೆ ಸೋಂಕು ತಗುಲಿರುವುದಾಗಿ ವರದಿಯಾಗಿದೆ.

ADVERTISEMENT

ಸೋಂಕಿನಿಂದಾಗಿ ಅಮೆರಿಕದಲ್ಲಿ 3.23 ಲಕ್ಷಕ್ಕೂ ಅಧಿಕ, ಭಾರತದಲ್ಲಿ 1.45 ಲಕ್ಷಕ್ಕೂ ಅಧಿಕ, ಬ್ರೆಜಿಲ್‌ನಲ್ಲಿ 1.86 ಲಕ್ಷಕ್ಕೂ ಅಧಿಕ, ರಷ್ಯಾದಲ್ಲಿ 50,858, ಫ್ರಾನ್ಸ್‌ನಲ್ಲಿ 60,418 ಮತ್ತು ಇಟಲಿಯಲ್ಲಿ 68,799 ಜನರು ಮೃತಪಟ್ಟಿದ್ದಾರೆ.

ಮೆಕ್ಸಿಕೊದಲ್ಲಿ ಹೊಸದಾಗಿ 12,129 ಸೋಂಕು ಪ್ರಕರಣಗಳು ದೃಢಪಟ್ಟಿರುವುದಾಗಿ ಶನಿವಾರ ವರದಿಯಾಗಿತ್ತು. ಅಲ್ಲಿ 627 ಮಂದಿ ಸೋಂಕಿತರು ಒಂದೇ ದಿನ ಮೃತಪಟ್ಟಿದ್ದಾರೆ. ಮೆಕ್ಸಿಕೊದಲ್ಲಿ ಈವರೆಗೆ ಒಟ್ಟು ಸೋಂಕಿತರಾದವರ ಸಂಖ್ಯೆ 13,13,675 ಆಗಿದ್ದು, 1,17,876 ಮಂದಿ ಸಾವಿಗೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.