ADVERTISEMENT

Covid-19 World Update | 2.8 ಕೋಟಿ ಸೋಂಕಿತರು, 9 ಲಕ್ಷಕ್ಕೂ ಹೆಚ್ಚು ಮಂದಿ ಸಾವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಸೆಪ್ಟೆಂಬರ್ 2020, 1:24 IST
Last Updated 10 ಸೆಪ್ಟೆಂಬರ್ 2020, 1:24 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   
""
""

ವಾಷಿಂಗ್ಟನ್: ಜಗತ್ತಿನಾದ್ಯಂತ 2.8 ಕೋಟಿಗೂ ಅಧಿಕ ಜನರು ಕೋವಿಡ್-19 ಸೋಂಕಿಗೆ ಒಳಗಾಗಿದ್ದರೆ, 9 ಲಕ್ಷಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಕೊರೊನಾ ವೈರಸ್‌ ವರ್ಡೊ ಮೀಟರ್‌ ತಿಳಿಸಿದೆ.

ಈವರೆಗೆ ಜಗತ್ತಿನಾದ್ಯಂತ ಸೋಂಕಿತರ ಸಂಖ್ಯೆ 2,80,14,815ಕ್ಕೆ ಮುಟ್ಟಿದ್ದು, 9,07,304 ಮಂದಿ ಮೃತಪಟ್ಟಿದ್ದಾರೆ. 2,00,91,717ಸೋಂಕಿತರು ಗುಣಮುಖರಾಗಿದ್ದಾರೆ. ಒಟ್ಟು 70,15,794 ಕೊರೊನಾ ಪ್ರಕರಣಗಳು ಸಕ್ರಿಯವಾಗಿವೆ.

ಸೋಂಕು ಪ್ರಕರಣಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಅಮೆರಿಕದಲ್ಲಿ 65,49,464 ಜನರಿಗೆ ಕೋವಿಡ್-19 ದೃಢಪಟ್ಟಿದೆ. ಸದ್ಯ 1,95,239 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 38,46,095 ಜನರು ಈ ವರೆಗೆ ಚೇತರಿಸಿಕೊಂಡಿದ್ದಾರೆ.

ADVERTISEMENT

ಭಾರತದಲ್ಲಿ 44,62,965, ಬ್ರೆಜಿಲ್‌ನಲ್ಲಿ 41,99,332, ರಷ್ಯಾದಲ್ಲಿ 10,41,007, ದಕ್ಷಿಣ ಆಫ್ರಿಕಾದಲ್ಲಿ 6,42,431, ಪೆರುವಿನಲ್ಲಿ 7,02,776, ಕೊಲಂಬಿಯಾದಲ್ಲಿ 6,86,856, ಚಿಲಿಯಲ್ಲಿ 4,27,027, ಇರಾನ್‌ನಲ್ಲಿ 3,93,425, ಇಂಗ್ಲೆಂಡ್‌ನಲ್ಲಿ 3,55,219ಮತ್ತು ಸ್ಪೇನ್‌ನಲ್ಲಿ 5,43,379 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.