ADVERTISEMENT

ಕೊರೊನಾ ಸೋಂಕು: ಸಿಂಗಾಪುರದಲ್ಲಿ ಪತ್ತೆಯಾದ 74 ಹೊಸ ಪ್ರಕರಣಗಳಲ್ಲಿ 7 ಭಾರತೀಯರು

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2020, 2:02 IST
Last Updated 2 ಏಪ್ರಿಲ್ 2020, 2:02 IST
   

ಸಿಂಗಾಪುರ: ಇಲ್ಲಿ ಬುಧವಾರ ವರದಿಯಾದ 74 ಹೊಸ ಕೊರೊನಾ ವೈರಸ್ ಸೋಂಕು ಪ್ರಕರಣಗಳಲ್ಲಿ ಏಳು ಭಾರತೀಯರುಸೇರಿದ್ದಾರೆ. ಆ ಮೂಲಕ ಸಿಂಗಾಪುರದಲ್ಲಿ ಒಟ್ಟು ಕೊರೊನಾ ವೈರಸ್‌ ಸೋಂಕು ಪ್ರಕರಣಗಳು 1000 ಗಡಿ ದಾಟಿದೆ.

ದೃಢಪಟ್ಟ ಹೊಸ ಪ್ರಕರಣಗಳಲ್ಲಿ 54 ಜನರು ಸ್ಥಳೀಯರಾಗಿದ್ದಾರೆ. ಅವರು ಹೊರದೇಶಗಳಿಗೆ ಭೇಟಿ ನೀಡಿದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ.

ಸಿಂಗಪುರ ಆರೋಗ್ಯ ಸಚಿವಾಲಯದ ಬಿಡುಗಡೆ ಮಾಡಿರುವ ಪಟ್ಟಿಯ ಪ್ರಕಾರ, ಹೊಸದಾಗಿ ಸೋಂಕು ಪತ್ತೆಯಾದವರಲ್ಲಿ 7 ಭಾರತೀಯರು ಸೇರಿದ್ದಾರೆ.

ADVERTISEMENT

ಸೋಂಕು ಪೀಡಿತರಲ್ಲಿ ಮೂವರು 28, 30 ಮತ್ತು 40 ವರ್ಷ ವಯಸ್ಸಿನವರಾಗಿದ್ದಾರೆ. ಅವರು ಅಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಭಾರತೀಯರು ಎಂದು ತಿಳಿದುಬಂದಿದೆ.

ಸಿಂಗಾಪುರ ವರ್ಕ್‌ ವಿಸಾ ಹೊಂದಿರುವ 50 ವರ್ಷದ ಮಧ್ಯ ವಯಸ್ಕ, 64 ವರ್ಷದ ವೃದ್ಧ ಸೇರಿದ್ದಾರೆ.

ಸಿಂಗಾಪುರ ವರ್ಕ್ ಪಾಸ್‌ನಲ್ಲಿರುವ 37 ವರ್ಷದ ಭಾರತೀಯ ಯುವಕ ಸೇರಿದಂತೆ, 20 ವರ್ಷದ ಭಾರತೀಯ ಮೂಲದ ಸಿಂಗಾಪುರ ಖಾಯಂ ನಿವಾಸಿ ಹೊಸದಾಗಿ ಸೋಂಕು ಪತ್ತೆಯಾದವರ ಪಟ್ಟಿಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.