ADVERTISEMENT

Covid-19 World Update: ಕಳೆದ 24 ಗಂಟೆಗಳಲ್ಲಿ ರಷ್ಯಾದಲ್ಲಿ 113 ಮಂದಿ ಸಾವು

ಏಜೆನ್ಸೀಸ್
Published 15 ಮೇ 2020, 16:17 IST
Last Updated 15 ಮೇ 2020, 16:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್‌: ರಷ್ಯಾದಲ್ಲಿ ಶುಕ್ರವಾರ 10598 ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 262843ಕ್ಕೇರಿದೆ. ಕಳೆದ 24 ಗಂಟೆಗಳಲ್ಲಿ ರಷ್ಯಾದಲ್ಲಿ 113 ಮಂದಿ ಸಾವಿಗೀಡಾಗಿದ್ದು, ಒಟ್ಟುಸಾವಿನ ಸಂಖ್ಯೆ 2418ಕ್ಕೇರಿದೆ.

ಚೀನಾದಲ್ಲಿ 15 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಈ ಪೈಕಿ 11 ಮಂದಿಗೆ ರೋಗ ಲಕ್ಷಣಗಳು ಇರಲಿಲ್ಲ ಎಂದು ಆರೋಗ್ಯ ಇಲಾಖೆ ಹೇಳಿದೆ. ಇದೀಗ ಪ್ರಕರಣಗಳ ಸಂಖ್ಯೆ 82,933ಕ್ಕೇರಿದೆ.

ಜಾನ್ಸ್ ಹಾಪ್ಕಿನ್ಸ್ ಕೊರೊನಾವೈರಸ್ ಸೆಂಟರ್ ಮಾಹಿತಿ ಪ್ರಕಾರ ಜಗತ್ತಿನಾದ್ಯಂತ 4483864 ಮಂದಿಗೆ ಕೊರೊನಾ ಸೋಂಕು ತಗುಲಿದೆ, ಅಮೆರಿಕದಲ್ಲಿ 1,420,299 , ರಷ್ಯಾ- 262843,ಬ್ರಿಟನ್ -238001 ಪ್ರಕರಣಗಳುಪತ್ತೆಯಾಗಿವೆ.

ADVERTISEMENT

ಇಲ್ಲಿಯವರೆಗೆ 303825 ಮಂದಿ ಕೋವಿಡ್-19 ರೋಗದಿಂದ ಸಾವಿಗೀಡಾಗಿದ್ದಾರೆ. ಅಮೆರಿಕದಲ್ಲಿ-85922, ಬ್ರಿಟನ್‌ನಲ್ಲಿ 34077 ಮತ್ತು ಇಟಲಿಯಲ್ಲಿ 32368 ಮಂದಿ ಸಾವಿಗೀಡಾಗಿದ್ದಾರೆ.

ಜಾಗತಿಕವಾಗಿ ಅಮೆರಿಕದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕು ಪ್ರಕರಣಗಳು ಕಂಡುಬಂದಿವೆ. ಕಳೆದ 24 ಗಂಟೆಗಳಲ್ಲಿ ಅಮೆರಿಕ ಒಂದರಲ್ಲೇ ಕೊರೊನಾ ಸೋಂಕಿಗೆ ಮೃತಪಟ್ಟವರ ಸಂಖ್ಯೆ 1,703ಕ್ಕೆ ಏರಿದ್ದು, ಒಟ್ಟು ಸಾವಿನ ಸಂಖ್ಯೆ 86,900 ತಲುಪಿದೆ.

ಸ್ಪೇನ್‌ನಲ್ಲಿ 27,321 , ಇಟಲಿಯಲ್ಲಿ 31,368 , ಇಂಗ್ಲೆಂಡ್‌ನಲ್ಲಿ 33,614, ಪ್ರಾನ್ಸ್‌ನಲ್ಲಿ 27,425 ಜನರು ಕೊರೊನಾ ಸೋಂಕಿನಿಂದ ಸಾವಿಗೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.