ವಾಷಿಂಗ್ಟನ್:ಜಗತ್ತಿನಾದ್ಯಂತ 1,96,90,080 ಜನರಿಗೆ ಕೋವಿಡ್–19 ಸೋಂಕು ದೃಢಪಟ್ಟಿದ್ದು, ಇದರಲ್ಲಿ 1,19,63,442 ಸೋಂಕಿತರು ಗುಣಮುಖರಾಗಿದ್ದಾರೆ. 7,27,897 ಸೋಂಕಿತರು ಮೃತಪಟ್ಟಿದ್ದಾರೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ಕೊರೊನಾ ಸಂಪನ್ಮೂಲ ಕೇಂದ್ರ ಮಾಹಿತಿ ನೀಡಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 2 ಕೋಟಿಯತ್ತಸಾಗಿದೆ.
ಜಗತ್ತಿನಲ್ಲಿ ಅತಿಹೆಚ್ಚು ಪ್ರಕರಣಗಳು ವರದಿಯಾಗಿರುವ ಅಮೆರಿಕದಲ್ಲಿ ಈ ವರೆಗೆ 50,10,679 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಲ್ಲಿ 16,43,118 ಸೋಂಕಿತರು ಗುಣಮುಖರಾಗಿದ್ದು, 1,62,555 ಮಂದಿ ಮೃತಪಟ್ಟಿದ್ದಾರೆ.
ಅಮೆರಿಕ ನಂತರ ಹೆಚ್ಚು ಪ್ರಕರಣಗಳು ವರದಿಯಾದ ರಾಷ್ಟ್ರಗಳ ಸಾಲಿನಲ್ಲಿರುವ ಬ್ರೆಜಿಲ್‌ನಲ್ಲಿ 30,12,412 ಪ್ರಕರಣಗಳು ಬೆಳಕಿಗೆ ಬಂದಿವೆ. 2,321,537 ಸೋಂಕಿತರು ಗುಣಮುಖರಾಗಿದ್ದು, 1,00,477 ಜನರು ಮೃತಪಟ್ಟಿದ್ದಾರೆ.
ರಷ್ಯಾದಲ್ಲಿ 8,85,718, ದಕ್ಷಿಣ ಆಫ್ರಿಕಾದಲ್ಲಿ 5,53,188, ಮೆಕ್ಸಿಕೋದಲ್ಲಿ 4,75,902, ಪೆರುವಿನಲ್ಲಿ 4,71,012, ಚಿಲಿಯಲ್ಲಿ 3,71,023 ಪ್ರಕರಣಗಳು ವರದಿಯಾಗಿವೆ.
ಜಗತ್ತಿನಲ್ಲೇ ಮೊದಲು ಸೋಂಕು ಕಾಣಿಸಿಕೊಂಡ ಚೀನಾದಲ್ಲಿ ಈ ವರೆಗೆ 88,744 ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ 4,685 ಸೋಂಕಿತರು ಮೃತಪಟ್ಟಿದ್ದು, 82,061 ಗುಣಮುಖರಾಗಿದ್ದಾರೆ. ಇನ್ನು ಕೇವಲ 1,998 ಸಕ್ರಿಯ ಪ್ರಕರಣಗಳು ಇವೆ ಎಂದು ವರದಿಯಾಗಿದೆ.
ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿ 2,84,121 ಪ್ರಕರಣಗಳು ದೃಢಪಟ್ಟಿದ್ದು, 2,60,248 ಸೋಂಕಿತರು ಗುಣಮುಖರಾಗಿದ್ದಾರೆ. 6,082 ಮಂದಿ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ.ಇಂಗ್ಲೆಂಡ್‌ನಲ್ಲಿ 3,12,550, ಸ್ಪೇನ್‌ನಲ್ಲಿ 3,14,362 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ.
ಕೋವಿಡ್‌ನಿಂದಾಗಿ ಇಂಗ್ಲೆಂಡ್‌ನಲ್ಲಿ 46,659, ಮೆಕ್ಸಿಕೊದಲ್ಲಿ 52,006, ಇಟಲಿಯಲ್ಲಿ 35,205, ಫ್ರಾನ್ಸ್‌ನಲ್ಲಿ 30,327, ಸ್ಪೇನ್‌ನಲ್ಲಿ 28,503, ಪೆರುವಿನಲ್ಲಿ 20,844, ಇರಾನ್‌ನಲ್ಲಿ 18,427, ರಷ್ಯಾದಲ್ಲಿ 14,903, ಚಿಲಿಯಲ್ಲಿ 10,011 ಮತ್ತು ದಕ್ಷಿಣ ಆಫ್ರಿಕಾದಲ್ಲಿ 10,210 ಜನರು ಸಾವಿಗೀಡಾಗಿದ್ದಾರೆ.
ಭಾರತದಲ್ಲಿ ಕೋವಿಡ್–19
ಭಾರತದಲ್ಲಿ ಆಗಸ್ಟ್ 9ರ ವರೆಗೆ ರಾತ್ರಿ 8ರ ವರೆಗೆ ಒಟ್ಟು21,53,011 ಪ್ರಕರಣಗಳು ವರದಿಯಾಗಿವೆ. ಈ ಪೈಕಿ 14,80,885 ಮಂದಿ ಗುಣಮುಖರಾಗಿದ್ದಾರೆ. 43,379 ಸೋಂಕಿತರು ಮೃತಪಟ್ಟಿದ್ದು, 6,28,747 ಸಕ್ರಿಯ ಪ್ರಕರಣಗಳಿವೆ ಎಂದುಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.