ADVERTISEMENT

Covid-19 World Update | ವಿಶ್ವದಾದ್ಯಂತ ಒಂದೇ ದಿನ 1 ಲಕ್ಷ ಮಂದಿಗೆ ಸೋಂಕು

ಏಜೆನ್ಸೀಸ್
Published 27 ಮೇ 2020, 16:49 IST
Last Updated 27 ಮೇ 2020, 16:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜಿನೀವಾ: ಜಗತ್ತಿದಾದ್ಯಂತ 5626047 ಸೋಂಕು ಪ್ರಕರಣಗಳು ವರದಿಯಾಗಿವೆ. ಅಮೆರಿಕದಲ್ಲಿ 1684174, ಬ್ರೆಜಿಲ್ -391222, ರಷ್ಯಾದಲ್ಲಿ 370680, ಬ್ರಿಟನ್‌ನಲ್ಲಿ 268615 ಸೋಂಕು ಪ್ರಕರಣಗಳು ಪತ್ತೆಯಾಗಿವೆ ಎಂದು ಜಾನ್ ಹಾಪ್ಕಿನ್ಸ್ ಕೊರೊನಾವೈರಸ್ ರಿಸೋರ್ಸ್ ಸೆಂಟರ್ ವರದಿ ಮಾಡಿದೆ.

ಇಲ್ಲಿಯವರಿಗೆ 351815 ಮಂದಿ ಕೋವಿಡ್ -19 ರೋಗದಿಂದ ಸಾವಿಗೀಡಾಗಿದ್ದಾರೆ. ಅಮೆರಿಕದಲ್ಲಿ 99,123 ಮಂದಿ ಸಾವಿಗೀಡಾಗಿದ್ದು, ಬ್ರಿಟನ್‌ನಲ್ಲಿ 37542 ಮತ್ತು ಇಟಲಿಯಲ್ಲಿ 32,955 ಮಂದಿ ಮೃತಪಟ್ಟಿದ್ದಾರೆ.

24 ಗಂಟೆಗಳ ಅವಧಿಯಲ್ಲಿ ವಿಶ್ವದಾದ್ಯಂತ ಸುಮಾರು 1 ಲಕ್ಷ ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹೇಳಿದೆ.

ADVERTISEMENT

ಒಂದೇ ದಿನ ಜಗತ್ತಿನಾದ್ಯಂತ 99,780 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಈ ಪೈಕಿ1,486 ಮಂದಿ ಮೃತಪಟ್ಟಿದ್ದಾರೆ. ಅಮೆರಿಕದಲ್ಲೇ ಅತಿ ಹೆಚ್ಚು ಪ್ರಕರಣ ಪತ್ತೆಯಾಗಿದೆ ಎಂದು ಡಬ್ಲ್ಯುಎಚ್‌ಒ ತಿಳಿಸಿದೆ.

ರಷ್ಯಾದಲ್ಲಿ ಕೋವಿಡ್-19 ನಿಂದಾಗಿ 3,807 ಮಂದಿ ಸಾವಿಗೀಡಾಗಿದ್ದು, ಪ್ರಕರಣಗಳ ಸಂಖ್ಯೆ 3.62 ಲಕ್ಷ ದಾಟಿದೆ. ಅಮೆರಿಕ ಮತ್ತು ಬ್ರೆಜಿಲ್ ನಂತರ ಅತಿ ಹೆಚ್ಚು ಸೋಂಕಿತರು ರಷ್ಯಾದಲ್ಲಿ ಇದ್ದಾರೆ.

ಬ್ರೆಜಿಲ್‌ನಲ್ಲಿ ಸೋಂಕಿತರ ಸಂಖ್ಯೆ 3.91 ಲಕ್ಷ ದಾಟಿದ್ದು, 24,512 ಜನ ಈವರೆಗೆ ಸಾವಿಗೀಡಾಗಿದ್ದಾರೆ. ಬ್ರಿಟನ್‌ನಲ್ಲಿ 2.66 ಲಕ್ಷಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದ್ದು, 37,130 ಜನ ಈವರೆಗೆ ಮೃತಪಟ್ಟಿದ್ದಾರೆ.

ಸೊಂಕಿನಿಂದಾಗಿ ಈವರೆಗೆ ಇಟಲಿಯಲ್ಲಿ 32,955, ಫ್ರಾನ್ಸ್‌ನಲ್ಲಿ 28,533, ಸ್ಪೇನ್‌ನಲ್ಲಿ 27,117 ಹಾಗೂ ಜರ್ಮನಿಯಲ್ಲಿ 8,372 ಜನ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.