ADVERTISEMENT

Covid-19 World Update: ಮೆಕ್ಸಿಕೊದಲ್ಲಿ ಒಂದೇ ದಿನ 10 ಸಾವಿರ ಪ್ರಕರಣ

ಏಜೆನ್ಸೀಸ್
Published 12 ಫೆಬ್ರುವರಿ 2021, 4:18 IST
Last Updated 12 ಫೆಬ್ರುವರಿ 2021, 4:18 IST
ಕೊರೊನಾ ವೈರಸ್‌ (ಸಾಂದರ್ಭಿಕ ಚಿತ್ರ)
ಕೊರೊನಾ ವೈರಸ್‌ (ಸಾಂದರ್ಭಿಕ ಚಿತ್ರ)   

ಮೆಕ್ಸಿಕೊ ನಗರ: ಮೆಕ್ಸಿಕೊದಲ್ಲಿ ಕಳೆದ 24 ಗಂಟೆಗಳಲ್ಲಿ 10,677 ಕೋವಿಡ್‌ ಪ್ರಕರಣಗಳು ದೃಢಪಟ್ಟಿದ್ದು, 1,474 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಇದರೊಂದಿಗೆ ಮೆಕ್ಸಿಕೊದಲ್ಲಿ ಸೋಂಕಿತರ ಸಂಖ್ಯೆ 19,68,566 ಕ್ಕೆ ಏರಿಕೆಯಾಗಿದೆ. ಆ ಪೈಕಿ 1,71,234 ಮಂದಿ ಸಾವಿಗೀಡಾಗಿದ್ದಾರೆ. ಈವರೆಗೆ 15,28,304 ಮಂದಿ ಸೋಂಕಿತರು ಗುಣಮುಖರಾಗಿದ್ದು, ಸದ್ಯ 2,69,028 ಸಕ್ರಿಯ ಪ್ರಕರಣಗಳಿವೆ.

ವಿಶ್ವದಾದ್ಯಂತ ಇದುವರೆಗೆ 10.82 ಕೋಟಿಗೂ ಹೆಚ್ಚು ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ. ಆ ಪೈಕಿ 23,78,759 ಮಂದಿ ಸೋಂಕಿತರು ಸಾವಿಗೀಡಾಗಿದ್ದಾರೆ. ಈವರೆಗೆ 8,03,27,049 ಮಂದಿ ಗುಣಮುಖರಾಗಿದ್ದಾರೆ. ಸದ್ಯ ವಿಶ್ವದಲ್ಲಿ 2,54,38,749 ಸಕ್ರಿಯ ಪ್ರಕರಣಗಳಿವೆ.

ADVERTISEMENT

ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿರುವ ಅಮೆರಿಕದಲ್ಲಿ 95,84,499, ಫ್ರಾನ್ಸ್‌ನಲ್ಲಿ 30,87,129, ಬ್ರೆಜಿಲ್‌ನಲ್ಲಿ 8,36,208, ಇಟಲಿಯಲ್ಲಿ 4,05,019, ರಷ್ಯಾದಲ್ಲಿ 4,10,639 ಸಕ್ರಿಯ ಪ್ರಕರಣಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.