ADVERTISEMENT

Covid-19 World Update | 1.47 ಕೋಟಿ ಕೊರೊನಾ ಸೋಂಕಿತರು, 6.11 ಲಕ್ಷ ಸಾವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಜುಲೈ 2020, 17:17 IST
Last Updated 21 ಜುಲೈ 2020, 17:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್: ಜಾನ್ಸ್‌ ಹಾಪ್ಕಿನ್ಸ್‌ ವಿಶ್ವವಿದ್ಯಾಲಯದ ಕೊರೊನಾ ವೈರಸ್ ರಿಸೋರ್ಸ್‌ ಸೆಂಟರ್ ಮಾಹಿತಿ ಪ್ರಕಾರ, ಜಗತ್ತಿನಾದ್ಯಂತ 1,47,55,228 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 6,11,322 ಮಂದಿ ಮೃತಪಟ್ಟಿದ್ದಾರೆ. ಈ ವರೆಗೆ 83,38,996 ಸೋಂಕಿತರು ಗುಣಮುಖರಾಗಿದ್ದಾರೆ.

ಜಗತ್ತಿನಲ್ಲಿ ಅತಿಹೆಚ್ಚು ಪ್ರಕರಣಗಳನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಅಮೆರಿಕವೊಂದರಲ್ಲೇ 38,50,134 ಸೋಂಕಿತರಿದ್ದು, ಈ ವರೆಗೆ 1,41,158 ಮಂದಿ ಸಾವಿಗೀಡಾಗಿದ್ದಾರೆ.

ಅಮೆರಿಕ ನಂತರ ಅತಿಹೆಚ್ಚು ಪ್ರಕರಣಗಳು ವರದಿಯಾದ ರಾಷ್ಟ್ರಗಳ ಸಾಲಿನಲ್ಲಿ ಬ್ರೆಜಿಲ್‌ ಇದ್ದು, ಈ ದೇಶದಲ್ಲಿ 21,18,646 ಪ್ರಕರಣಗಳು ಬೆಳಕಿಗೆ ಬಂದಿವೆ. 15,21,443 ಸೋಂಕಿತರು ಗುಣಮುಖರಾಗಿದ್ದು, 80,120 ಜನರು ಮೃತಪಟ್ಟಿದ್ದಾರೆ.

ADVERTISEMENT

ಭಾರತದಲ್ಲಿ 11,55,354, ರಷ್ಯಾದಲ್ಲಿ 7,82,040, ಪೆರುವಿನಲ್ಲಿ 3,53,590, ದಕ್ಷಿಣ ಆಫ್ರಿಕಾದಲ್ಲಿ 3,73,628, ಚಿಲಿಯಲ್ಲಿ 3,34,683, ಇಂಗ್ಲೆಂಡ್‌ನಲ್ಲಿ 2,97,389, ಸ್ಪೇನ್‌ನಲ್ಲಿ 2,66,194 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ.

ಕೋವಿಡ್‌ನಿಂದಾಗಿ ಇಂಗ್ಲೆಂಡ್‌ನಲ್ಲಿ 45,507, ಇಟಲಿಯಲ್ಲಿ 35,073, ಮೆಕ್ಸಿಕೊದಲ್ಲಿ 39,485, ಪ್ರಾನ್ಸ್‌ನಲ್ಲಿ 30,180, ಸ್ಪೇನ್‌ನಲ್ಲಿ 28,424, ಪೆರುವಿನಲ್ಲಿ 13,187, ರಷ್ಯಾದಲ್ಲಿ 12,561, ಚಿಲಿಯಲ್ಲಿ 8,677, ದಕ್ಷಿಣ ಆಫ್ರಿಕಾದಲ್ಲಿ 5,173 ಮತ್ತು ಪಾಕಿಸ್ತಾನದಲ್ಲಿ 5,639 ಜನರು ಸಾವಿಗೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.