
ಪಿಟಿಐ
ಜೆರುಸಲೇಂ: ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತ ಸೇರಿದಂತೆ ಒಟ್ಟು ಆರು ದೇಶಗಳಿಗೆ ಪ್ರಯಾಣಿಸದಂತೆ ಇಸ್ರೇಲ್ ಸರ್ಕಾರ ನಿರ್ಬಂಧ ವಿಧಿಸಿದೆ.
ಇಸ್ರೇಲ್‌ನ ನಾಗರಿಕರು ಉಕ್ರೇನ್, ಬ್ರೆಜಿಲ್, ದಕ್ಷಿಣ ಆಫ್ರಿಕಾ, ಭಾರತ, ಮೆಕ್ಸಿಕೊ ಮತ್ತು ಟರ್ಕಿಗೆ ಪ್ರವಾಸ ಕೈಗೊಳ್ಳಬಾರದೆಂದು ಪ್ರಧಾನಿ ಕಚೇರಿ ಮತ್ತು ಆರೋಗ್ಯ ಸಚಿವಾಲಯವು ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
‘ಈ ನಿರ್ಬಂಧವು ಮೇ 3ರಿಂದ ಮೇ 16ರ ತನಕ ಜಾರಿಯಲ್ಲಿರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.