ADVERTISEMENT

Covid-19 World update| 5.48 ಕೋಟಿ ತಲುಪಿದ ಸೋಂಕಿತರ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2020, 3:02 IST
Last Updated 16 ನವೆಂಬರ್ 2020, 3:02 IST
ಹವಾನಾದಲ್ಲಿ ಭಾನುವಾರದಿಂದ (ನ.15) ವಾಣಿಜ್ಯ ವಿಮಾನಗಳ ಸೇವೆ ಪುನರಾರಂಭಗೊಂಡಿದೆ. ಜೋಸ್ ಮಾರ್ಟಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರೊಬ್ಬರಿಂದ ಆರೋಗ್ಯ ಕಾರ್ಯಕರ್ತರು ಗಂಟಲು ದ್ರವ ಸಂಗ್ರಹಿಸುತ್ತಿರುವುದು. (ಎಎಫ್‌ಪಿ ಚಿತ್ರ)
ಹವಾನಾದಲ್ಲಿ ಭಾನುವಾರದಿಂದ (ನ.15) ವಾಣಿಜ್ಯ ವಿಮಾನಗಳ ಸೇವೆ ಪುನರಾರಂಭಗೊಂಡಿದೆ. ಜೋಸ್ ಮಾರ್ಟಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರೊಬ್ಬರಿಂದ ಆರೋಗ್ಯ ಕಾರ್ಯಕರ್ತರು ಗಂಟಲು ದ್ರವ ಸಂಗ್ರಹಿಸುತ್ತಿರುವುದು. (ಎಎಫ್‌ಪಿ ಚಿತ್ರ)   

ಬೆಂಗಳೂರು: ಜಗತ್ತಿನಾದ್ಯಂತ 5.48 ಕೋಟಿಗೂ ಅಧಿಕ ಜನರು ಕೋವಿಡ್-19 ಸೋಂಕಿಗೆ ಒಳಗಾಗಿದ್ದರೆ, 13 ಲಕ್ಷಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಕೋವಿಡ್‌ ಟ್ರ್ಯಾಕರ್‌ 'ವರ್ಲ್ಡೋಮೀಟರ್‌' ತಿಳಿಸಿದೆ.

ಈವರೆಗೆ ಜಗತ್ತಿನಾದ್ಯಂತ ಸೋಂಕಿತರ ಸಂಖ್ಯೆ 5,48,04,194ಕ್ಕೆ ಮುಟ್ಟಿದ್ದು, 13,24,025 ಮಂದಿ ಮೃತಪಟ್ಟಿದ್ದಾರೆ. 3,81,29,282ಸೋಂಕಿತರು ಗುಣಮುಖರಾಗಿದ್ದಾರೆ. ಒಟ್ಟು 1,53,50,887 ಕೊರೊನಾ ಪ್ರಕರಣಗಳು ಸಕ್ರಿಯವಾಗಿವೆ.

ಸೋಂಕು ಪ್ರಕರಣಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಅಮೆರಿಕದಲ್ಲಿ 1,13,65,052 ಜನರಿಗೆ ಕೋವಿಡ್-19 ದೃಢಪಟ್ಟಿದೆ. ಸದ್ಯ 2,51,832 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 69,34,613 ಜನರು ಈ ವರೆಗೆ ಚೇತರಿಸಿಕೊಂಡಿದ್ದಾರೆ.

ADVERTISEMENT

ಭಾರತದಲ್ಲಿ 88,45,617, ಬ್ರೆಜಿಲ್‌ನಲ್ಲಿ 58,63,093, ರಷ್ಯಾದಲ್ಲಿ 19,25,825, ಇರಾನ್‌ನಲ್ಲಿ 7,62,068, ಕೊಲಂಬಿಯಾದಲ್ಲಿ 11,98,746, ಪೆರುವಿನಲ್ಲಿ 9,37,011 ಪ್ರಕರಣಗಳು ವರದಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.