ADVERTISEMENT

Covid-19 World Update: 57 ಲಕ್ಷ ದಾಟಿದ ಸೋಂಕಿತರ ಸಂಖ್ಯೆ

ಏಜೆನ್ಸೀಸ್
Published 28 ಮೇ 2020, 17:18 IST
Last Updated 28 ಮೇ 2020, 17:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್‌: ಜಗತ್ತಿನಾದ್ಯಂತ ಈವರೆಗೆ ಒಟ್ಟು5,731,837 ಜನರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದ್ದು, 3,56,606 ಜನರು ಮೃತಪಟ್ಟಿದ್ದಾರೆ ಎಂದು ಜಾನ್ಸ್‌ ಹಾಪ್‌ಕಿನ್ಸ್ ಕೊರೊನಾ ವೈರಸ್ ರಿಸೋರ್ಸ್ ಸೆಂಟರ್ ಮಾಹಿತಿ ನೀಡಿದೆ.

ಜಗತ್ತಿನಲ್ಲೇ ಅತಿಹೆಚ್ಚು ಸೋಂಕು ಪ್ರಕರಣಗಳು ಕಾಣಿಸಿಕೊಂಡಿರುವ ಅಮೆರಿಕದಲ್ಲಿ ಇದುವರೆಗೆ 1,00,651ಸೋಂಕಿತರು ಸಾವಿಗೀಡಾಗಿದ್ದಾರೆ. ಇಲ್ಲಿ ಒಟ್ಟು1,703,989 ಜನರಲ್ಲಿ ಸೋಂಕು ಕಾಣಿ‌ಸಿಕೊಂಡಿದ್ದು,3,91,508 ಜನರು ಗುಣಮುಖರಾಗಿದ್ದಾರೆ.

ಬ್ರೆಜಿಲ್‌ನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 4,11,821ಕ್ಕೆ ತಲುಪಿದ್ದು, 25,598ಜನರು ಸಾವಿಗೀಡಾಗಿದ್ದಾರೆ. ಇಟಲಿಯಲ್ಲಿ 2,31,139 ಜನರಿಗೆ ಸೋಂಕು ತಗುಲಿದ್ದು,33,142 ಮಂದಿ ಮೃತಪಟ್ಟಿದ್ದಾರೆ.

ADVERTISEMENT

ಇಂಗ್ಲೆಂಡ್‌ನಲ್ಲಿ 37,919,ಸ್ಪೇನ್‌ನಲ್ಲಿ 27,119, ಪ್ರಾನ್ಸ್‌ನಲ್ಲಿ 28,599ಜನರು ಸಾವಿಗೀಡಾಗಿದ್ದಾರೆ.

ಅತಿಹೆಚ್ಚು ಸೋಂಕು ಪ್ರಕರಣಗಳು ಕಾಣಿಸಿಕೊಂಡ ದೇಶಗಳ ಸಾಲಿನಲ್ಲಿಭಾರತವು ಹತ್ತನೇ ಸ್ಥಾನದಲ್ಲಿದೆ. ಈವರೆಗೆ 1,58,333 ಮಂದಿ ಕೊರೊನಾ ಸೋಂಕಿತರಾಗಿದ್ದಾರೆ. ಇದರಲ್ಲಿ,67,692 ಮಂದಿ ಗುಣಮುಖರಾಗಿದ್ದು, 4,531 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಉಳಿದಂತೆ 86,110 ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.