ADVERTISEMENT

ಕೋವಿಡ್‌ | ರಷ್ಯಾದಲ್ಲಿ ಲಸಿಕೆ ಪ್ರಯೋಗ ಪೂರ್ಣ: ಅಕ್ಟೋಬರ್‌ನಲ್ಲಿ ಸಾಮೂಹಿಕ ಲಸಿಕೆ

ಏಜೆನ್ಸೀಸ್
Published 2 ಆಗಸ್ಟ್ 2020, 5:10 IST
Last Updated 2 ಆಗಸ್ಟ್ 2020, 5:10 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮಾಸ್ಕೊ: ರಷ್ಯಾ ದೇಶದಲ್ಲಿ ಕೊರೊನಾ ವೈರಸ್‌ಗೆ ಲಸಿಕೆಯನ್ನು ತಯಾರಿಸಲಾಗಿದ್ದು ಮೂರನೇ ಹಂತದ ವೈದ್ಯಕೀಯ ಪ್ರಯೋಗಗಳು ಮುಕ್ತಾಯಗೊಂಡಿವೆ ಎಂದು ರಷ್ಯಾ ಮಾಧ್ಯಮಗಳು ವರದಿ ಮಾಡಿವೆ.

ಇಲ್ಲಿನ ಗಮಲೇಯ ವಿಶ್ವವಿದ್ಯಾನಿಲಯ ನೇತೃತ್ವದಲ್ಲಿ ಮಿಲಿಟರಿ ಹಾಗೂ ಸರಕಾರಿ ಸಂಶೋಧಕರು ಲಸಿಕೆಯನ್ನು ತಯಾರಿಸಿದ್ದಾರೆ. ಈಗಾಗಲೇ ಎರಡು ಹಂತದ ಪ್ರಯೋಗಗಳು ಯಶಸ್ವಿಯಾಗಿ ನಡೆದಿದ್ದು ಮೂರನೇ ಹಂತದ ಪ್ರಯೋಗ ಮುಕ್ತಯಗೊಂಡಿದೆ ಎಂದು ವರದಿಯಾಗಿದೆ. ಆದರೆ ಈ ಪ್ರಯೋಗ ಯಶಸ್ವಿಯಾಗಿರುವ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ.

ಕೊರೊನಾ ವೈರಸ್ ಲಸಿಕೆಯವೈದ್ಯಕೀಯ ಪ್ರಯೋಗಗಳನ್ನು ಪೂರ್ಣಗೊಳಿಸಲಾಗಿದ್ದು ನೋಂದಣಿಗಾಗಿ ಸರ್ಕಾರ ಹಾಗೂ ವೈದ್ಯಕೀಯ ನಿಯಂತ್ರಣ ಸಂಸ್ಥೆಯೊಂದಿಗೆ ಕಾಗದ ಪತ್ರಗಳನ್ನು ಸಿದ್ಧಪಡಿಸುವ ಕೆಲಸ ನಡೆಯುತ್ತಿದೆ ಎಂದು ಲಸಿಕೆ ತಯಾರಿಸಿರುವ ಸಂಶೋಧಕರುತಿಳಿಸಿದ್ದಾರೆಎಂದು ರಷ್ಯಾದ ಮಾಧ್ಯಮಗಳು ಶನಿವಾರ ವರದಿ ಮಾಡಿವೆ.

ಈ ಮಧ್ಯೆ, ಅಕ್ಟೋಬರ್‌ನಲ್ಲಿ ಸಾಮೂಹಿಕ ಕೋವಿಡ್‌ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದ್ದು,ಮೊದಲ ಹಂತದಲ್ಲಿ ವೈದ್ಯರು ಮತ್ತು ಶಿಕ್ಷಕರಿಗೆ ಲಸಿಕೆ ಹಾಕಲಾಗುವುದು ಎಂದು ರಷ್ಯಾದ ಆರೋಗ್ಯ ಸಚಿವರು ನೀಡಿರುವ ಹೇಳಿಕೆಯನ್ನು ಮಾಧ್ಯಮಗಳುವರದಿ ಮಾಡಿವೆ.

ಆದರೆ ರಷ್ಯಾದ ಕೆಲವು ಮಾಧ್ಯಮಗಳು ಮೂರನೇ ಹಂತದ ವೈದ್ಯಕೀಯ ಪ್ರಯೋಗಗಳಿಗೆ ಸುಮಾರು ತಿಂಗಳುಗಳೇ ಬೇಕು ಎಂದು ಹೇಳಿವೆ. ಜುಲೈ ತಿಂಗಳಲ್ಲಿ ಎರಡನೇ ಹಂತದ ಪ್ರಯೋಗಯಶಸ್ವಿಯಾಗಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಕಡಿಮೆ ಅವಧಿಯಲ್ಲಿ ಮೂರನೇ ಹಂತದ ಪರೀಕ್ಷೆ ನಡೆಸಲು ಸಾಧ್ಯವಿಲ್ಲ ಎಂದು ಟಾಸ್‌ ನ್ಯೂಸ್‌ ತಿಳಿಸಿದೆ.

ಮೂರನೇ ಹಂತದ ಪ್ರಯೋಗ ಮುಖ್ಯವಾಗಿದ್ದು ಲಸಿಕೆ ಮಾನವನ ದೇಹದಲ್ಲಿ ಯಾವ ರೀತಿ ಕೆಲಸ ಮಾಡಲಿದೆ, ರೋಗ ನಿರೋಧಕ ಶಕ್ತಿ ಹೆಚ್ಚಳವಾಗುವ ಕ್ರಮ, ಅಡ್ಡಪರಿಣಾಮಗಳ ಕುರಿತಂತೆಯೂ ಪರಿಶೀಲನೆ ನಡೆಸಬೇಕು. ಇದಕ್ಕೆ ಸಾವಿರಾರು ಜನರನ್ನು ಪ್ರಯೋಗಕ್ಕೆ ಒಳಪಡಿಸಬೇಕು. ಈ ಪ್ರಕ್ರಿಯೆಗಾಗಿ ಸುಮಾರು ತಿಂಗಳುಗಳು ಅಥವಾ ವರ್ಷಗಳೇ ಬೇಕು ಎಂದು ಟಾಸ್‌ ನ್ಯೂಸ್‌ ವರದಿ ಮಾಡಿದೆ.

ಸೋಂಕಿನ ತೀವ್ರತೆಯನ್ನು ಕಡಿಮೆ ಮಾಡಲು ಎರಡನೇ ಹಂತದ ಯಶಸ್ವಿ ಪ್ರಯೋಗವನ್ನೇ ಆಧಾರವಾಗಿಟ್ಟುಕೊಂಡು ಸಾರ್ವಜನಿಕರಿಗೆ ಲಸಿಕೆ ಹಾಕಲು ಸರ್ಕಾರ ಅನುಮತಿ ನೀಡಬಹುದು ಎಂದು ಸಹ ಹೇಳಲಾಗುತ್ತಿದೆ. ಸಾರ್ವಜನಿಕರಿಗೆ ಲಸಿಕೆಯನ್ನು ನೀಡಿದ ಬಳಿಕ ಮೂರನೇ ಹಂತದ ಪ್ರಯೋಗಗಳನ್ನು ಪರಿಶೀಲನೆ ಮಾಡಲಾಗುವುದು ಎಂದು ರಷ್ಯಾದ ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಲಸಿಕೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೂ ಸರ್ಕಾರಯಾವುದೇ ಅಧಿಕೃತ ಮಾಹಿತಿಗಳನ್ನುಬಿಡುಗಡೆಮಾಡಿಲ್ಲ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.