ADVERTISEMENT

ಗಡಿ ಸಂಘರ್ಷದಲ್ಲಿ 20ಕ್ಕಿಂತ ಕಡಿಮೆ ಪಿಎಲ್‌ಎ ಸೈನಿಕರ ಸಾವು; ಚೀನಾ ಪತ್ರಿಕೆ

ಏಜೆನ್ಸೀಸ್
Published 23 ಜೂನ್ 2020, 5:05 IST
Last Updated 23 ಜೂನ್ 2020, 5:05 IST
ಭಾರತದ ಗಡಿಯಲ್ಲಿ ಚೀನಾ ಸೇನೆ (ಪ್ರಾತಿನಿಧಿಕ ಚಿತ್ರ)
ಭಾರತದ ಗಡಿಯಲ್ಲಿ ಚೀನಾ ಸೇನೆ (ಪ್ರಾತಿನಿಧಿಕ ಚಿತ್ರ)   

ಬೀಜಿಂಗ್‌:ಲಡಾಖ್‌ನ ಗಲ್ವಾನ್‌ ಕಣಿವೆ ಪ್ರದೇಶದಲ್ಲಿ ಚೀನಾ ಮತ್ತು ಭಾರತೀಯ ಸೇನಾಪಡೆಗಳ ನಡುವೆ ನಡೆದಿದ್ದ ಘರ್ಷಣೆಯಲ್ಲಿ ಪೀಪಲ್‌ ಲಿಬರೇಶನ್‌ ಆರ್ಮಿ (ಪಿಎಲ್‌ಎ) 20ಕ್ಕಿಂತ ಕಡಿಮೆ ಸೈನಿಕರನ್ನು ಕಳೆದುಕೊಂಡಿದೆ ಎಂದು ಕಮ್ಯುನಿಸ್ಟ್‌ ಪಾರ್ಟಿ ಆಫ್‌ ಚೀನಾ (ಸಿಪಿಸಿ) ನಡೆಸುತ್ತಿರುವ 'ಗ್ಲೋಬಲ್ ಟೈಮ್ಸ್'ಪ್ರತಿಕೆಮೊದಲ ಬಾರಿಗೆ ವರದಿ ಮಾಡಿದೆ. ಈ ಮೂಲಕ ಚೀನಾ ಸಹ ತನ್ನ ಸೈನಿಕರು ಮೃತಪಟ್ಟಿರುವುದನ್ನು ಅಧಿಕೃತವಾಗಿ ಒಪ್ಪಿಕೊಂಡಂತೆ ಆಗಿದೆ.

20 ಭಾರತೀಯ ಯೋಧರು ಹುತಾತ್ಮರಾಗಲು ಕಾರಣವಾದ ಘರ್ಷಣೆಯಲ್ಲಿ ಪಿಎಲ್‌ಎ ಅನುಭವಿಸಿದ ನಷ್ಟದ ಬಗ್ಗೆ ಪ್ರತಿಕ್ರಿಯಿಸಲು ಸೋಮವಾರ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯನ್ ನಿರಾಕರಿಸಿದ್ದರು.

ಇದರ ಬೆನ್ನಲೇ ಸಿಪಿಸಿ ನಡೆಸುತ್ತಿರುವ ಗ್ಲೋಬಲ್‌ ಟೈಮ್ಸ್‌ ಪತ್ರಿಕೆ, ‘ಗಲ್ವಾನ್ಘರ್ಷಣೆಯಲ್ಲಿ ಪಿಎಲ್‌ಎ ಸುಮಾರು20 ಯೋಧರನ್ನು ಕಳೆದುಕೊಂಡಿದೆಟ್ವಿಟರ್‌ನಲ್ಲಿ ಹೇಳಿಕೊಂಡಿದೆ. ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನತೆ ಹೆಚ್ಚಾಗುವುದನ್ನು ತಪ್ಪಿಸಲು ಚೀನಾ ಸರ್ಕಾರ ಸಾವು–ನೋವುಗಳ ಸಂಖ್ಯೆಯನ್ನು ಬಿಡುಗಡೆ ಮಾಡಿಲ್ಲ' ಎಂದು ಮತ್ತೊಂದು ಟ್ವೀಟ್‌ ಮಾಡಿದೆ.

ಯೋಧರ ಸಾವುನೋವಿನ ಸಂಖ್ಯೆಯನ್ನು ಬಹಿರಂಗಪಡಿಸುವುದರಿಂದ ಭಾರತದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಬಹುದೆಂದು ಹೇಳಲಾಗಿದೆ. ಜೊತೆಗೆ, ‘ಚೀನಾದೊಂದಿಗೆ ಯುದ್ಧ ಮಾಡಲು ಭಾರತಕ್ಕೆ ಸಾಧ್ಯವಿಲ್ಲ’ ಎಂದು ಉಲ್ಲೇಖಿಸಲಾಗಿದೆ.

ಗಡಿ ಸಂಘರ್ಷ ಕುರಿತು ಕಳೆದ ಶನಿವಾರ ಪ್ರತಿಕ್ರಿಯಿಸಿದ್ದ ಕೇಂದ್ರ ಸಚಿವ ವಿ.ಕೆ.ಸಿಂಗ್‌, ‘ಭಾರತದ ಕಡೆ 20 ಯೋಧರು ಹುತಾತ್ಮರಾಗಿದ್ದರೆ, ಅವರ(ಚೀನಾ) ಕಡೆ ಇದರ ಎರಡು ಪಟ್ಟು ಸಾವುನೋವುಗಳು ಸಂಭವಿಸಿರಬಹುದು' ಎಂದು ಹೇಳಿಕೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.