rip
ಚಿತ್ರ: ಡೆಕ್ಕನ್ ಹೆರಾಲ್ಡ್
ಲಂಡನ್: ಬ್ರಿಟನ್‌ನ ಜನಪ್ರಿಯ ಲೇಖಕ ಫ್ರೆಡರಿಕ್ ಫೋರ್ಸೈತ್ (86) ಅವರು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂದು ಅವರ ಏಜೆಂಟ್ ಸೋಮವಾರ ತಿಳಿಸಿದರು.
‘ಡೇ ಆಫ್ ದಿ ಜಾಕಲ್’ ಸೇರಿದಂತೆ ಅನೇಕ ಥ್ರಿಲ್ಲರ್ ಕಾದಂಬರಿಗಳಿಂದ ಫ್ರೆಡರಿಕ್ ಅವರು ಜನಪ್ರಿಯರಾಗಿದ್ದರು.
‘ಜಗತ್ತಿನ ಶ್ರೇಷ್ಠ ಥ್ರಿಲ್ಲರ್ ಕಾದಂಬರಿಗಳ ಲೇಖಕ ನಮ್ಮನ್ನು ಅಗಲಿದ್ದಾರೆ’ ಎಂದು ಏಜೆಂಟ್ ಜೊನಾಥನ್ ಲಾಯ್ಡ್ ತಿಳಿಸಿದರು.
‘ದಿ ಅಫ್ಗನ್’, ‘ದಿ ಕಿಲ್ ಲಿಸ್ಟ್’, ‘ಡಾಗ್ಸ್ ಆಫ್ ವಾರ್’, ‘ದಿ ಫಿಸ್ಟ್ ಆಫ್ ಗಾಡ್’ ಸೇರಿದಂತೆ 25ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಈ ಪುಸ್ತಕಗಳ 7.5 ಕೋಟಿ ಪ್ರತಿಗಳು ಮಾರಾಟವಾಗಿವೆ ಎಂದು ಲಾಯ್ಡ್ ತಿಳಿಸಿದರು.
ಫ್ರೆಡರಿಕ್ ಅವರು ದಕ್ಷಿಣ ಬ್ರಿಟನ್‌ನ ಕೆಂಟ್‌ನಲ್ಲಿ 1938ರಲ್ಲಿ ಜನಿಸಿದ್ದರು. ಇವರು ರಾಯಲ್ ಏರ್‌ಫೋರ್ಸ್ ಪೈಲಟ್ ಆಗಿಯೂ ಸೇವೆ ಸಲ್ಲಿಸಿದ್ದರು. ವಿದೇಶದಲ್ಲಿ ಸುದ್ದಿಗಾರರಾಗಿದ್ದರು. 1962ರಲ್ಲಿ ನಡೆದ ಫ್ರಾನ್ಸ್ ಅಧ್ಯಕ್ಷ ಚಾರ್ಲ್ಸ್ ದೆ ಗೌಲೆ ಅವರ ಹತ್ಯೆ ಯತ್ನದ ಬಗ್ಗೆಯೂ ವರದಿ ಮಾಡಿದ್ದರು. ‘ದಿ ಡೇ ಆಫ್ ದಿ ಜಾಕಲ್’ ಕಾದಂಬರಿ ಬರೆಯಲು ಇದು ಸ್ಫೂರ್ತಿಯಾಗಿತ್ತು. ಈ ಪುಸ್ತಕ ಅವರಿಗೆ ಜಗತ್ಪ್ರಸಿದ್ಧಿ ತಂದುಕೊಟ್ಟಿತ್ತು. 1973ರಲ್ಲಿ ಈ ಕಾದಂಬರಿ ಆಧರಿತ ಸಿನಿಮಾ ಮಾಡಲಾಗಿದೆ.
‘ಬ್ರಿಟಿಷ್ ಗುಪ್ತಚರ ದಳ ಎಂ16ನಲ್ಲಿಯೂ ಹಲವು ವರ್ಷ ಕೆಲಸ ಮಾಡಿದ್ದೆ’ ಎಂದು ಫ್ರೆಡರಿಕ್ ಅವರು ಬಿಬಿಸಿ ಸುದ್ದಿಸಂಸ್ಥೆ ಬಳಿ 2015ರಲ್ಲಿ ಹೇಳಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.