ಕೈರೋ: ಒಮ್‌ಡರ್ಮನ್‌ನಲ್ಲಿ ಸುಡಾನ್ ಸೇನಾ ವಿಮಾನ ಪತನಗೊಂಡು, ಕನಿಷ್ಠ 46 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದರು.
ಆಂಟೊನೋವ್ ವಿಮಾನವು ಒಮ್‌ಡರ್ಮನ್‌ನ ಉತ್ತರದ ವಾದಿ ಸಯಿದ್ನಾ ವಾಯುನೆಲೆಯಿಂದ ಮಂಗಳವಾರ ಟೇಕ್–ಆಫ್ ಆಗುವಾಗ ಪತನಗೊಂಡಿದೆ ಎಂದು ಸೇನಾ ಹೇಳಿಕೆ ತಿಳಿಸಿದೆ.
ಅಪಘಾತದಲ್ಲಿ 10 ಜನರು ಗಾಯಗೊಂಡಿದ್ದು, ಸಶಸ್ತ್ರ ಪಡೆಗಳ ಸಿಬ್ಬಂದಿ ಮತ್ತು ನಾಗರಿಕರು ಮೃತಪಟ್ಟಿದ್ದಾರೆ ಎಂದು ಸೇನೆ ತಿಳಿಸಿದೆ. ಆದರೆ ಘಟನೆಗೆ ಕಾರಣವೇನೆಂದು ಅದು ತಿಳಿಸಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.