ADVERTISEMENT

ಟರ್ಕಿ, ಸಿರಿಯಾ ಭೂಕಂಪ: 47 ಸಾವಿರ ದಾಟಿದ ಮೃತರ ಸಂಖ್ಯೆ

ಏಜೆನ್ಸೀಸ್
Published 23 ಫೆಬ್ರುವರಿ 2023, 14:11 IST
Last Updated 23 ಫೆಬ್ರುವರಿ 2023, 14:11 IST
ಟರ್ಕಿ ಮತ್ತು ಸಿರಿಯಾದ ಸಂಭವಿಸಿದ ಭಾರೀ ಭೂಕಂಪನದಿಂದ ಧ್ವಂಸಗೊಂಡಿರುವ ಕಟ್ಟಡಗಳನ್ನು ವೀಕ್ಷಿಸುತ್ತಿರುವ ಸರ್ಕಾರೇತರ ಸಂಸ್ಥೆಯ ಅಧಿಕಾರಿಗಳು 
ಟರ್ಕಿ ಮತ್ತು ಸಿರಿಯಾದ ಸಂಭವಿಸಿದ ಭಾರೀ ಭೂಕಂಪನದಿಂದ ಧ್ವಂಸಗೊಂಡಿರುವ ಕಟ್ಟಡಗಳನ್ನು ವೀಕ್ಷಿಸುತ್ತಿರುವ ಸರ್ಕಾರೇತರ ಸಂಸ್ಥೆಯ ಅಧಿಕಾರಿಗಳು    

ಅಂಕಾರಾ (ಎಪಿ): ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭಾರೀ ಭೂಕಂಪನದಲ್ಲಿ ಮೃತಪಟ್ಟವರ ಸಂಖ್ಯೆ 47,000 ದಾಟಿದೆ ಎಂದು ಟರ್ಕಿಯ ಗೃಹ ಸಚಿವ ಸುಲೇಮನ್‌ ಸೊಯ್ಲು ಅವರು ಗುರುವಾರ ತಿಳಿಸಿದ್ದಾರೆ.

ಭೂಕಂಪದಿಂದ ಹಾತೆ ಪ್ರಾಂತ್ಯ ಜರ್ಜರಿತಗೊಂಡಿದ್ದು, ಅನೇಕ ಕಟ್ಟಡಗಳನ್ನು ನೆಲಸಮವಾಗಿವೆ. ಇದರ ಅವಶೇಷಗಳ ಅಡಿಯಲ್ಲಿ ಮೃತದೇಹಗಳು ಪತ್ತೆಯಾಗುತ್ತಿವೆ. ಟರ್ಕಿ ಮತ್ತು ಸಿರಿಯಾದಲ್ಲಿ ಮೃತಪಟ್ಟವರ ಸಂಖ್ಯೆ 47,224 ಆಗಿದೆ. ಮೃತದೇಹಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ಅವರು ಹೇಳಿದ್ದಾರೆ.

ಈ ಅವಘಡದಿಂದ ಅಂದಾಜು 1,64,000 ಕಟ್ಟಡಗಳು ಧ್ವಂಸಗೊಂಡಿವೆ ಅಥವಾ ನೆಲಸಮ ಮಾಡಬೇಕಾಗಿದೆ ಎಂದು ಟರ್ಕಿಯ ಪರಿಸರ ಮತ್ತು ನಗರೀಕರಣ ಸಚಿವ ಮುರಾತ್ ಕುರ್ಮ್‌ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.