ADVERTISEMENT

ಅಮೆರಿಕದಲ್ಲಿ ಸಿಖ್ ದೌರ್ಜನ್ಯಗಳ ತಡೆಗೆಕ್ರಮ ಕೈಗೊಳ್ಳಿ: ಮಾನವ ಹಕ್ಕಗಳ ತಜ್ಞರು

ಗಡ್ಡ, ತಲೆಗೂದಲು ಕತ್ತರಿಸಲು ಸಿಖ್ ಸಮುದಾಯಕ್ಕೆ ಸೂಚನೆ

ಪಿಟಿಐ
Published 8 ಮಾರ್ಚ್ 2022, 12:42 IST
Last Updated 8 ಮಾರ್ಚ್ 2022, 12:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್(ಪಿಟಿಐ): ಕಳೆದ ಕೆಲವು ವರ್ಷಗಳಿಂದ ಅಮೆರಿಕದಲ್ಲಿ ಸಿಖ್ ಸಮುದಾಯದ ವಿರುದ್ಧ ಧಾರ್ಮಿಕ ಅಸಮಾನತೆ ಮತ್ತು ದ್ವೇಷದ ಹಿಂಸಾಚಾರ ಘಟನೆಗಳು ಹೆಚ್ಚಾಗಿವೆ ಎಂದು ಮಾನವ ಹಕ್ಕುಗಳ ತಜ್ಞರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸಿಖ್ ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಅಮೆರಿಕದ ಆಡಳಿತ ಮತ್ತು ಸಂಸದರಿಗೆ ಒತ್ತಾಯಿಸಲಾಗಿದೆ.

ಅಮೆರಿಕದಲ್ಲಿ ಸಾರಿಗೆ, ಮನೋರಂಜನೆ, ವೈದ್ಯಕೀಯ, ಸೇನೆ ಮತ್ತು ಕಾನೂನು ಸುವ್ಯವಸ್ಥೆ ಸೇರಿದಂತೆ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಖ್ ಸಮುದಾಯದ ಕುರಿತಾಗಿ ಪಕ್ಷಪಾತದ ನಿಲುವುಗಳಿಂದ ದೌರ್ಜನ್ಯಗಳು ಹೆಚ್ಚಿವೆ.

ತಮ್ಮ ದೇಶ ಮತ್ತು ತಾವು ವಾಸಿಸುವ ನಗರಗಳ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿಕೊಳ್ಳಲು ಸಿಖ್ಖರು ಬದ್ಧರಾಗಿದ್ದಾರೆ. ಆದರೆ ಏಕರೂಪ ಸೇರಿದಂತೆ ಇನ್ನಿತರ ನೀತಿಗಳು ಸಿಖ್ಖರ ನಂಬಿಕೆಗಳ ಮೇಲೆ ನಿಷೇಧ ಹೇರುತ್ತಿವೆ. ಅಮೆರಿಕದಲ್ಲಿ ಸಿಖ್ಖರಿಗೆ ತಲೆ ಕೂದಲು ಮತ್ತು ಗಡ್ಡ ತೆಗೆಯುವಂತೆ ಸೂಚಿಸಲಾಗುತ್ತಿದೆ. ಇದು ಅಮೆರಿಕದಲ್ಲಿ ಸಿಖ್, ತೃತೀಯ ಲಿಂಗಿಗಳು ಅಲ್ಲದೆ ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ತೇಜೋವಧೆಗಳಾಗಿವೆ ಎಂದು ಸಿಖ್ಖರ ಕಾನೂನು ನಿರ್ದೇಶಕಿ ಅಮೃತ್ ಕೌರ್ ಆಕ್ರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.