ADVERTISEMENT

ಅಂಗವಿಕಲ ಮಾಲೀಕನ ಗಾಲಿಕುರ್ಚಿ ತಳ್ಳುವ ಶ್ವಾನ: ಹೃದಯಸ್ಪರ್ಶಿ ವಿಡಿಯೊ

​ಪ್ರಜಾವಾಣಿ ವಾರ್ತೆ
Published 20 ಜುಲೈ 2018, 2:31 IST
Last Updated 20 ಜುಲೈ 2018, 2:31 IST
   

‘ನಾಯಿ ಮನುಷ್ಯನ ಅತ್ಯುತ್ತಮ ಸ್ನೇಹಿತ’ ಎಂಬ ನಾಣ್ನುಡಿ ಬಹಳ ಹಳೆಯದು. ಈಗ ಈ ನುಡಿ ಹೊಸತು ಹೊಸತು ಎನ್ನುವಂತಹ ಅರ್ಥವನ್ನು ವಿಡಿಯೊವೊಂದು ಹೃದಯಸ್ಪರ್ಶಿಯಾಗಿಸಿದೆ.

ಅಂಗವಿಕಲ ವೈಖಲ್ಯದ ತನ್ನ ಮಾಲೀಕ ಕುಳಿತ ಗಾಲಿಕುರ್ಚಿಯನ್ನು ರಸ್ತೆಯಲ್ಲಿ ಶ್ವಾನ ತಳ್ಳಿಕೊಂಡು ಹೋಗುತ್ತಿರುವ ಅಪರೂಪದ, ಸುಂದರ ಕ್ಷಣದ ವಿಡಿಯೊವೊಂದನ್ನು ಫೇಸ್‌ಬುಕ್‌ ಬಳಕೆದಾರರು ಸೆರೆಹಿಡಿದಿದ್ದಾರೆ.

ಈ ದೃಶ್ಯ ಸೆರೆಯಾಗಿರುವುದು ಪಿಲಿಫೈನ್ಸ್‌ನಲ್ಲಿ. ಸಂತೋಷಕರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮಂದಿ ವೀಕ್ಷಿಸಿದ್ದು, ಸಂಚಲನವನ್ನೇ ಉಂಟು ಮಾಡಿದೆ.

ADVERTISEMENT

ಈ ದೃಶ್ಯವನ್ನು ಎಂಬಿಎ ವಿದ್ಯಾರ್ಥಿನಿ ಮಿಸ್ಸಿಸ್‌ ಫೇಯ್ತ್‌ ಎಲ್‌ ರೆವಿಲ್ಲಾ ಎಂಬುವರು ಸೆರೆಹಿಡಿದಿದ್ದು, ಜೂನ್‌ 30ರಂದು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಈವರೆಗೆ 1278 ಮಂದಿ ವಿಡಿಯೊವನ್ನು ಶೇರ್‌ ಮಾಡಿಕೊಂಡಿದ್ದು, ಒಂದು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ.

‘ಗಾಲಿಕುರ್ಚಿಯನ್ನು ತಳ್ಳುವ ಮೂಲಕ ಈ ಜೀವಿ ಆಶ್ಚರ್ಯಕರ ರೀತಿಯಲ್ಲಿ ಸಹಾಯ ಮಾಡುವ ಅಪರೂಪದ ಕ್ಷಣಕ್ಕೆ ನಾವು ಸಾಕ್ಷಿಯಾದೆವು’ ಎಂದು ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದು, ‘ಈ ಭಾವನಾತ್ಮಕ ದೃಶ್ಯವನ್ನು ವರ್ಣಿಸಲು ನನ್ನಲ್ಲಿ ಪದಗಳಿಲ್ಲ’ ಎಂದಿದ್ದಾರೆ.

‘ಮೆಟ್ರೊ’ ಪ್ರಕಾರ, ಗಾಲಿಕುರ್ಚಿಯಲ್ಲಿ ತೆರಳಿರುವ ವ್ಯಕ್ತಿ 46 ವರ್ಷ ವಯಸ್ಸಿನ ಡಾನಿಲೋ ಅರಾಕೋನ್‌. ಅವರಿಗೆ ವರ್ಷದ ಹಿಂದ ನಡೆದ ಅಪಘಾತದಲ್ಲಿ ಬೆನ್ನುಮೂಳೆ ಮುರಿದಿದೆ. ಈ ಘಟನೆ ಬಳಿಕ ಅವರಿಗೆ ನಡೆಯಲು ಸಾಧ್ಯವಾಗದೆ ಗಾಲಿಕುರ್ಚಿ ಬಳಸುತ್ತಿದ್ದಾರೆ. ಈ ಶ್ವಾನವು ಅದು ಜನಿಸಿದ ದಿನಗಳಿಂದ ಅವರ ಜತೆಗೆ ಇದೆ.

ಶ್ವಾನವು ರಸ್ತೆಯಲ್ಲಿ ಗಾಲಿಕುರ್ಚಿಯನ್ನು ತನ್ನ ತಲೆಯಿಂದ ಮುಂದೆ ತಳ್ಳುತ್ತಿರುವ ದೃಶ್ಯ ವಿಡಿಯೊದಲ್ಲಿದೆ.

ಶ್ವಾನ ನೆರವು ನೀಡುತ್ತದೆ. ಅದರ ಜತೆ ಅವರು ಒಂದಷ್ಟು ಸಂಭಾಷಣೆ ಮಾಡುತ್ತಾರೆ. ಅವರ ಈ ಜೋಡಿ ನೋಡಿದಾಗ ಅದು ಅತ್ಯಂತ ಸುಂದರದ ಕ್ಷಣಗಳು ಎನಿಸಿತು. ಡಾನಿಲೋ ಅವರಿಗೆ ಚಿಕಿತ್ಸೆಗೆ ನೆರವಾಗಲು ಬಯಸಿದ್ದೇವೆ ಎಂದು ’ಮೆಟ್ರೊ’ ಹೇಳಿದೆ ಎಂದು ಎನ್‌ಡಿ ಟಿ.ವಿ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.