ADVERTISEMENT

ನಾನು ಯಾವುದೇ ತಪ್ಪು ಮಾಡಿಲ್ಲ: ಟ್ರಂಪ್‌

ಬರಾಕ್‌ ದಂಪತಿ ವಿರುದ್ಧ ಜನಾಂಗೀಯ ನಿಂದನೆ: ಟ್ರಂಪ್‌ ವಿರುದ್ಧ ಆರೋಪ

ರಾಯಿಟರ್ಸ್
Published 7 ಫೆಬ್ರುವರಿ 2026, 14:26 IST
Last Updated 7 ಫೆಬ್ರುವರಿ 2026, 14:26 IST
ಮಿಷೆಲ್‌ ಒಬಾಮ–ಬರಾಕ್‌ ಒಬಾಮ 
ಮಿಷೆಲ್‌ ಒಬಾಮ–ಬರಾಕ್‌ ಒಬಾಮ    

ವಾಷಿಂಗ್ಟನ್‌: ಅಮೆರಿಕ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ಮತ್ತು ಪತ್ನಿ ಮಿಷೆಲ್‌ ಒಬಾಮ ಅವರ ವಿರುದ್ಧ ಜನಾಂಗೀಯ ನಿಂದನೆಯ ವಿಡಿಯೊವನ್ನು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದರು. ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆ ಕಂಡುಬಂದ ಬಳಿಕ ಅದನ್ನು ತೆಗೆದು ಹಾಕಿರುವ ಅವರು, ಈ ವಿಚಾರವಾಗಿ ಕ್ಷಮೆ ಯಾಚಿಸುವುದಿಲ್ಲ ಎಂದು ಹೇಳಿದ್ದಾರೆ.

‘ದಿ ಲಯನ್‌ ಸ್ಲೀಪ್ಸ್‌ ಟುನೈಟ್‌’ ಹೆಸರಿನ 62 ಸೆಕೆಂಡುಗಳ ವಿಡಿಯೊದಲ್ಲಿ, ಕೋತಿಯ ದೇಹಕ್ಕೆ ಒಬಾಮ ದಂಪತಿ ಮುಖದ ಚಿತ್ರವನ್ನು ಅಂಟಿಸಲಾಗಿತ್ತು. 2020ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಪಿತೂರಿ ಸಿದ್ಧಾಂತ ಪ್ರಚಾರ ಮಾಡಿದ್ದರು ಎಂದು ಶೀರ್ಷಿಕೆ ನೀಡಿದ್ದರು. ಇದು ಅಮೆರಿಕದ ಕಪ್ಪು ಜನಾಂಗದ ಕುರಿತು ಟ್ರಂಪ್‌ ಅವರು ಪ್ರಕಟಿಸಿದ ಹೊಸ ಆಕ್ಷೇಪಾರ್ಹ ಪೋಸ್ಟ್‌ ಎನ್ನಲಾಗುತ್ತಿದ್ದು, ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. 

ಈ ಕುರಿತು ಏರ್‌ಫೋರ್ಸ್‌ ಒನ್‌ ವಿಮಾನದಲ್ಲಿ ಸುದ್ದಿಗಾರರ ಜೊತೆ ಶುಕ್ರವಾರ ಮಾತನಾಡಿದ ಅವರು, ‘ನಾನು ವಿಡಿಯೊದ ಮೊದಲಾರ್ಧವನ್ನು ವೀಕ್ಷಿಸಿದ್ದೇನೆ. ಜಾರ್ಜಿಯಾದ ಕೆಲವೆಡೆಗಳಲ್ಲಿ ನಡೆದ ಮತದಾನದ ವಂಚನೆ ಕುರಿತಾಗಿ ಮೊದಲಾರ್ಧ ಒಳಗೊಂಡಿತ್ತು, ನಾನು ಪೂರ್ತಿ ನೋಡಿಲ್ಲ’ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ADVERTISEMENT

‘ಈ ಲಿಂಕ್‌ ಅನ್ನು ಬೇರೆಯವರು ಪೋಸ್ಟ್ ಮಾಡಿದ್ದಾರೆ. ಅವರೇ ಅದನ್ನು ಪರಿಶೀಲಿಸುತ್ತಾರೆ. ಈ ವಿಚಾರದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ’ ಎಂದು ಸಮರ್ಥಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.