ADVERTISEMENT

‘ಟ್ರಂಪ್–ಮೋದಿ ವೇದಿಕೆ ಹಂಚಿಕೆ: ಪಾಕ್ ಪ್ರಧಾನಿ ಇಮ್ರಾನ್‌ಗೆ ಕಪಾಳಮೋಕ್ಷವೇ ಸರಿ’

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2019, 3:41 IST
Last Updated 22 ಸೆಪ್ಟೆಂಬರ್ 2019, 3:41 IST
   

ಹ್ಯೂಸ್ಟನ್‌:‘ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೆಕೊಳ್ಳಲಿರುವುದು ಪಾಕಿಸ್ತಾನಪ್ರಧಾನಿ ಇಮ್ರಾನ್‌ ಖಾನ್‌ಗೆ ಕಪಾಳಮೋಕ್ಷವೇ ಸರಿ’ ಎಂದು 2016ರ ಅಧ್ಯಕ್ಷೀಯ ಚುನಾವಣೆ ವೇಳೆ ಟ್ರಂಪ್‌ ಅವರ ಪ್ರಚಾರ ಸಲಹೆಗಾರರಾಗಿದ್ದ ಶಲಭ್‌ ಶಲ್ಲಿ ಕುಮಾರ್‌ ಹೇಳಿದ್ದಾರೆ.

ಭಾರತ ಮೂಲದ ಅಮೆರಿಕ ಉದ್ಯಮಿಯಾಗಿರುವ ಕುಮಾರ್‌, ಟ್ರಂಪ್‌ ಹಾಗೂ ಭಾರತ ಸಂಬಂಧದ ಬಗ್ಗೆಯೂ ಮಾತನಾಡಿದ್ದಾರೆ. ‘ಒಂದುವೇಳೆ ನಾನು ಚುನಾಯಿತನಾದರೆ ಭಾರತಕ್ಕೆಶ್ವೇತಭವನದಲ್ಲಿ ಒಬ್ಬ ಒಳ್ಳೆಯ ಸ್ನೇಹಿತ ಸಿಗಲಿದ್ದಾನೆ. ನಾವು ಹಿಂದೂಗಳನ್ನು ಪ್ರೀತಿಸುತ್ತೇವೆ ಎಂದು ಚುನಾವಣಾ ಪ್ರಚಾರದ ವೇಳೆಟ್ರಂಪ್‌ ಹೇಳಿದ್ದರು. ಟ್ರಂಪ್‌ ಹಾಗೂ ಅವರ ಸರ್ಕಾರ ಈ ವಿಚಾರದಲ್ಲಿ ಬದ್ಧವಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚೆಗೆ ಟ್ರಂಪ್‌ ಅವರುಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಹೇಳುವ ಮೂಲಕ ಭಾರತದ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು, ‘ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಆ ಸಂದರ್ಭದಲ್ಲಿ ಕೇಳಲಾದ ಕೆಲವು ಪ್ರಶ್ನೆಗಳಿಗೆ ಉತ್ತರಿಸುವಾಗ ಆ ಹೇಳಿಕೆ ನೀಡಲಾಗಿದೆ. ಅದು ಪೂರ್ವಯೋಜಿತವಲ್ಲ. ಅದರಲ್ಲಿ ಯಾವುದೇ ಉದ್ದೇಶ ಇಲ್ಲ’ ಎಂದಿದ್ದಾರೆ.

ಬಹುನಿರೀಕ್ಷಿತ‘ಹೌಡಿ ಮೋದಿ’ ಕಾರ್ಯಕ್ರಮವು ಇಂದು ನಡೆಯಲಿದ್ದು,ಸುಮಾರು 50 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ಸಾದ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.