ADVERTISEMENT

ವಿಚ್ಛೇದಿತ ಪತ್ನಿಗೆ ₹ 5,527 ಕೋಟಿ ಪರಿಹಾರ: ಯುಎಇ ಪ್ರಧಾನಿಗೆ ಕೋರ್ಟ್‌ ಸೂಚನೆ

ಏಜೆನ್ಸೀಸ್
Published 21 ಡಿಸೆಂಬರ್ 2021, 19:31 IST
Last Updated 21 ಡಿಸೆಂಬರ್ 2021, 19:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಲಂಡನ್: ಯುಎಇಯ ಪ್ರಧಾನಿ ಶೇಖ್‌ ಮೊಹಮ್ಮದ್‌ ಬಿನ್ ರಶೀದ್ ಅಲ್‌ ಮಕ್ತೌಂ ಅವರು ವಿಚ್ಛೇದಿತ ಪತ್ನಿ ಹಯಾ ಬಿಂಟ್ ಅಲ್‌ ಹುಸೇನಿ ಹಾಗೂ ಅವರ ಇಬ್ಬರು ಮಕ್ಕಳಿಗೆ ₹ 5,527 ಕೋಟಿ (730 ಮಿಲಿಯನ್ ಡಾಲರ್) ಪರಿಹಾರ ನೀಡಬೇಕು ಎಂದು ಬ್ರಿಟನ್‌ನ ಹೈಕೋರ್ಟ್‌ ಮಂಗಳವಾರ ಆದೇಶಿಸಿದೆ.

ವಿಚ್ಛೇದನಕ್ಕೆ ಸಂಬಂಧಿಸಿ, ಬ್ರಿಟನ್‌ನ ಇತಿಹಾಸದಲ್ಲಿಯೇ ಅತ್ಯಂತ ದುಬಾರಿ ಪರಿಹಾರ ನೀಡಿರುವ ಪ್ರಕರಣ ಇದು ಎಂದು ಹೇಳಲಾಗುತ್ತಿದೆ.

‘ಹಯಾ ಹುಸೇನಿ ಹಾಗೂ ಅವರ ಇಬ್ಬರು ಮಕ್ಕಳ ಜೀವಕ್ಕೆ ಶೇಖ್ ಮೊಹಮ್ಮದ್‌ ಅವರಿಂದಲೇ ಹೆಚ್ಚು ಬೆದರಿಕೆ ಇದೆ. ಅವರಿಗೆ ಅಧಿಕ ಭದ್ರತೆಯ ಅಗತ್ಯ ಇದೆ’ ಎಂದು ನ್ಯಾಯಾಧೀಶ ಫಿಲಿಪ್‌ ಮೂರ್‌ ಆದೇಶದಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.