ADVERTISEMENT

ಕೊರೊನಾ| ಚೀನಾ ಭಾರತೀಯರ ಗಮನಕ್ಕೆ: ಭಾರತೀಯ ರಾಯಭಾರ ಕಚೇರಿ ಸಂಪರ್ಕಿಸಿ

ಕೊರೊನಾ ವೈರಸ್: ಚೀನಾದಲ್ಲಿರುವ ಭಾರತೀಯರನ್ನು ರಕ್ಷಿಸಲು ಮುಂದಾದ ಕೇಂದ್ರ ಸರ್ಕಾರ

ಏಜೆನ್ಸೀಸ್
Published 29 ಜನವರಿ 2020, 12:34 IST
Last Updated 29 ಜನವರಿ 2020, 12:34 IST
ಕೊರೊನಾವೈರಸ್: ಚೀನಾದ ಭಾರತೀಯರು ಸಹಾಯಕ್ಕಾಗಿ ರಾಯಭಾರ ಕಚೇರಿಯ ಹಾಟ್ ಲೈನ್ ಸಂಪರ್ಕಿಸಿ
ಕೊರೊನಾವೈರಸ್: ಚೀನಾದ ಭಾರತೀಯರು ಸಹಾಯಕ್ಕಾಗಿ ರಾಯಭಾರ ಕಚೇರಿಯ ಹಾಟ್ ಲೈನ್ ಸಂಪರ್ಕಿಸಿ   

ಬೀಜಿಂಗ್ (ಚೀನಾ): ಕೊರೊನಾ ವೈರಸ್ ಪೀಡಿತ ಚೀನಾದಿಂದ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಚೀನಾದ ಭಾರತೀಯ ರಾಯಭಾರ ಕಚೇರಿ ಎಲ್ಲಾ ವ್ಯವಸ್ಥೆ ಮಾಡುತ್ತಿದೆ.

ಬುಧವಾರ ಹಾಟ್ ಲೈನ್‌‌ಗಳನ್ನು ಆರಂಭಿಸಿದ್ದು ಯಾರು ಇಲ್ಲಿಯವರೆಗೆ ರಾಯಭಾರ ಕಚೇರಿಯನ್ನು ಸಂಪರ್ಕಿಸಿಲ್ಲವೋ ಅಂತಹ ಭಾರತೀಯ ಪ್ರಜೆಗಳು ಚೀನಾದ ಬೀಜಿಂಗ್ ರಾಯಭಾರ ಕಚೇರಿಯ ಹಾಟ್‌‌ಲೈನ್ ಸಂಖ್ಯೆ

+8618610952903, +8618612083629, +8618612083617 ಅಥವಾ ಸಹಾಯಕೇಂದ್ರದ ಇಮೇಲ್ ವಿಳಾಸ
helpdesk.beijing@mea.gov.in ಇಲ್ಲಿಗೆ ಸಂಪರ್ಕಿಸಬಹುದು.

ADVERTISEMENT

ಚೀನಾದವುಹಾನ್ ನಗರ, ಹುಬೇ ಪ್ರಾವಿನ್ಸ್ ನಗರಗಳಭಾರತೀಯ ಪ್ರಜೆಗಳು ಹಾಗೂ ಭಾರತೀಯ ವಿದ್ಯಾರ್ಥಿಗಳನ್ನು ಈಗಾಗಲೆ ಸಂಪರ್ಕಿಸಿದ್ದು, ಇನ್ನೂ ಸಂಪರ್ಕಕ್ಕೆ ಬರದೇ ಇರುವವರು, ಅಥವಾ ಕೇಂದ್ರ ಸರ್ಕಾರವಾಗಲೀ ಅಥವಾ ರಾಜ್ಯಸರ್ಕಾರಗಳಾಗಲಿ ಸಂಪರ್ಕಿಸದೇ ಇರುವಂತಹ ವ್ಯಕ್ತಿಗಳು ಮೇಲಿನ ಹಾಟ್ ಲೈನ್ ಅಥವಾ ಇ ಮೇಲ್ ವಿಳಾಸದ ಮೂಲಕ ಸಂಪರ್ಕಿಸಬೇಕು,ಈಗಾಗಲೇ ಎಲ್ಲಾ ನಾಗರಿಕರನ್ನು ಸುರಕ್ಷಿತವಾಗಿ ಚೀನಾದಿಂದ ಭಾರತಕ್ಕೆ ಕರೆತರಲುಕ್ರಮ ಕೈಗೊಳ್ಳಲಾಗಿದೆ ಎಂದು ರಾಯಭಾರ ಕಚೇರಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.