ADVERTISEMENT

ಬ್ರಿಟನ್‌: ಪತ್ರಿಕೆ ಮುದ್ರಣಾ ಘಟಕಗಳ ಮುಂದೆ ಧರಣಿ, ಪತ್ರಿಕೆಗಳ ವಿತರಣೆ ವ್ಯತ್ಯಯ

ಏಜೆನ್ಸೀಸ್
Published 5 ಸೆಪ್ಟೆಂಬರ್ 2020, 12:44 IST
Last Updated 5 ಸೆಪ್ಟೆಂಬರ್ 2020, 12:44 IST
ಮುದ್ರಣಾ ಘಟಕಗಳಿಗೆ ತೆರಳುವ ರಸ್ತೆಗೆ ವಾಹನಗಳನ್ನು ಅಡ್ಡವಿಟ್ಟು ಪ್ರತಿಭಟನೆ ನಡೆಸಿದ ಪ್ರತಿಭಟನಕಾರರು –ರಾಯಿಟರ್ಸ್‌ ಚಿತ್ರ 
ಮುದ್ರಣಾ ಘಟಕಗಳಿಗೆ ತೆರಳುವ ರಸ್ತೆಗೆ ವಾಹನಗಳನ್ನು ಅಡ್ಡವಿಟ್ಟು ಪ್ರತಿಭಟನೆ ನಡೆಸಿದ ಪ್ರತಿಭಟನಕಾರರು –ರಾಯಿಟರ್ಸ್‌ ಚಿತ್ರ    

ಲಂಡನ್‌: ಬ್ರಿಟನ್‌ನಲ್ಲಿರುವ ಎರಡು ದಿನಪತ್ರಿಕೆ ಮುದ್ರಣಾ ಘಟಕಗಳ ಕಾರ್ಯಾಚರಣೆಗೆ ಪರಿಸರ ಕಾರ್ಯಕರ್ತರು ಅಡ್ಡಿಪಡಿಸಿದ ಕಾರಣ, ಶನಿವಾರ ಹಲವು ರಾಷ್ಟ್ರೀಯ ದಿನಪತ್ರಿಕೆಗಳ ವಿತರಣೆಯಲ್ಲಿ ವ್ಯತ್ಯಯ ಉಂಟಾಗಿತ್ತು.

‘ಎಕ್ಸ್‌ಟಿನ್ಕ್ಷನ್‌ ರೆಬೆಲಿಯನ್‌’ ತಂಡವು ರೂಪರ್ಟ್‌ ಮರ್ಡೋಕ್‌ ನ್ಯೂಸ್‌ ಕಾರ್ಪೊರೇಷನ್‌ಗೆ ಸೇರಿದ ಎರಡು ಮುದ್ರಣಾ ಘಟಕಗಳಿಗೆ ಸಾಗುವ ದಾರಿಯಲ್ಲಿ ಬಿದಿರಿನ ಅಟ್ಟಣಿಗಳನ್ನು ನಿರ್ಮಿಸಿ, ವಾಹನಗಳನ್ನು ಅಡ್ಡವಿಟ್ಟು ರಸ್ತೆ ತಡೆದಿದ್ದರು. ಈ ಘಟಕದಲ್ಲಿ ದಿ ಸನ್‌, ದಿ ಟೈಮ್ಸ್‌, ದಿ ಡೈಲಿ ಟೆಲಿಗ್ರಾಫ್‌, ದಿ ಡೈಲಿ ಮೇಲ್‌ ಹಾಗೂ ಫೈನಾನ್ಸಿಯಲ್‌ ಟೈಮ್ಸ್‌ ಮುದ್ರಣವಾಗುತ್ತಿವೆ.

‘ತಮ್ಮ ವೈಯಕ್ತಿಕ ಹಾಗೂ ರಾಜಕೀಯ ಉದ್ದೇಶಗಳಿಗಾಗಿ ಸತ್ಯವನ್ನೇ ಇಂಥ ಸಂಸ್ಥೆಗಳು ಮರೆಮಾಚುತ್ತಿವೆ. ಹವಾಮಾನ ಹಾಗೂ ಪರಿಸರಕ್ಕೆ ಸಂಬಂಧಿಸಿದ ತುರ್ತುಪರಿಸ್ಥಿತಿಯ ಕುರಿತು ಕರಾರುವಾಕ್ಕಾದ ವರದಿ ಮಾಡುವಲ್ಲಿ ಈ ಸಂಸ್ಥೆ ವಿಫಲವಾಗಿದೆ. ಈ ಕಾರಣದಿಂದ ದಿನಪತ್ರಿಕೆಗಳ ಮುದ್ರಣಕ್ಕೆ ಅಡ್ಡಿಪಡಿಸುತ್ತಿದ್ದೇವೆ’ ಎಂದು ಪ್ರತಿಭಟನಕಾರರು ತಿಳಿಸಿದ್ದಾರೆ.

ADVERTISEMENT

ಶನಿವಾರ ಮುಂಜಾನೆ 13 ಪ್ರತಿಭಟನಕಾರರನ್ನು ಪೊಲೀಸರು ಬಂಧಿಸಿದ್ದು, ಪ್ರತಿಭಟನೆಯು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ಸಂಸ್ಥೆಯು ಖಂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.