ADVERTISEMENT

ಇಥಿಯೋಪಿಯಾ ವಿಮಾನ ಪತನ: ತನಿಖೆ ಆರಂಭ

ಏಜೆನ್ಸೀಸ್
Published 15 ಮಾರ್ಚ್ 2019, 19:04 IST
Last Updated 15 ಮಾರ್ಚ್ 2019, 19:04 IST
ವಿಮಾನ ದುರಂತದಲ್ಲಿ ಮೃತಪಟ್ಟವರ ಸಂಬಂಧಿಕರ ರೋದನ
ವಿಮಾನ ದುರಂತದಲ್ಲಿ ಮೃತಪಟ್ಟವರ ಸಂಬಂಧಿಕರ ರೋದನ   

ಆಡಿಸ್ ಅಬಬಾ: ಬೋಯಿಂಗ್ 737 ಮ್ಯಾಕ್ಸ್ 8 ವಿಮಾನ ಪತನ ಪ್ರಕರಣದ ತನಿಖೆ ಪ್ಯಾರಿಸ್‌ನಲ್ಲಿಆರಂಭವಾಗಿದೆ ಎಂದು ಇಥಿಯೋಪಿಯನ್‌ ಏರ್‌ಲೈನ್ಸ್‌ ಶುಕ್ರವಾರ ತಿಳಿಸಿದೆ.

ಅಪಘಾತ ತನಿಖಾ ದಳ ಮತ್ತು ಫ್ರೆಂಚ್‌ ಸುರಕ್ಷತಾ ಸಂಸ್ಥೆ ಪ್ರಕರಣದ ತನಿಖೆ ನಡೆಸುತ್ತಿದೆ ಎಂದು ವಿಮಾನಯಾನ ಸಂಸ್ಥೆ ಟ್ವೀಟ್‌ ಮಾಡಿದೆ.

ಇದನ್ನೂ ಓದಿ...ಇಥಿಯೋಪಿಯಾ ವಿಮಾನ ಪತನ

ADVERTISEMENT

ಕಳೆದ ಭಾನುವಾರ ಪತನಗೊಂಡಿದ್ದ ಇಥಿಯೋಪಿಯನ್‌ ವಿಮಾನದ ಎರಡು ಬ್ಲ್ಯಾಕ್‌ ಬಾಕ್ಸ್‌ಗಳನ್ನು ತನಿಖೆಗಾಗಿ ಪ್ಯಾರಿಸ್‌ಗೆ ಗುರುವಾರ ಕಳುಹಿಸಲಾಗಿದೆ. ಬೋಯಿಂಗ್‌ ವಿಮಾನವು ಆಡಿಸ್‌ ಅಬಾಬಾದಿಂದ ಟೇಕಾಫ್ ಆದ ಆರೇ ನಿಮಿಷಗಳಲ್ಲಿ ಪತನಗೊಂಡಿತ್ತು.

ಪತನದಲ್ಲಿ ಹಾನಿಗೊಂಡಿರುವ ಕಾಕ್‌ಪಿಟ್‌ ವಾಯ್ಸ್‌ಮತ್ತು ಫ್ಲೈಟ್‌ ರೆಕಾರ್ಡರ್‌ಗಳಿಂದ ಮಾಹಿತಿ ಪಡೆಯಲು ಬಿಇಎ ತನಿಖಾಧಿಕಾರಿಗಳು ಪ್ರಯತ್ನಿಸಲಿದ್ದಾರೆಎಂದು ಏರ್‌ ಲೈನ್ಸ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.