ADVERTISEMENT

ತೈಲ ಆಮದು ನಿಷೇಧಿಸಿದರೆ ರಷ್ಯಾ ಯುದ್ಧ ವೆಚ್ಚ ಇಳಿಸಬೇಕಾಗುತ್ತದೆ: ಐರೋಪ್ಯ ಒಕ್ಕೂಟ

ರಾಯಿಟರ್ಸ್
Published 31 ಮೇ 2022, 11:37 IST
Last Updated 31 ಮೇ 2022, 11:37 IST
ಜೋಸೆಫ್‌ ಬೋರೆಲ್
ಜೋಸೆಫ್‌ ಬೋರೆಲ್   

ಆ್ಯಮ್‌ಸ್ಟರ್‌ಡ್ಯಾಮ್: ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದನ್ನು ಐರೋಪ್ಯ ಒಕ್ಕೂಟವು ನಿಷೇಧಿಸಿದಲ್ಲಿ, ಯುದ್ಧಕ್ಕಾಗಿ ಮಾಡಬೇಕಾದ ವೆಚ್ಚವನ್ನು ರಷ್ಯಾ ತಗ್ಗಿಸಲೇಬೇಕಾಗುತ್ತದೆ ಎಂದು ಒಕ್ಕೂಟದ ರಾಜತಾಂತ್ರಿಕ ಜೋಸೆಫ್ ಬೋರೆಲ್ ಮಂಗಳವಾರ ಹೇಳಿದ್ದಾರೆ.

ಅಲ್ಲದೇ, ಇತರ ದೇಶಗಳಿಗೆ ರಷ್ಯಾ ಅತ್ಯಂತ ಕಡಿಮೆ ದರದಲ್ಲಿ ಕಚ್ಚಾ ತೈಲವನ್ನು ಮಾರಾಟಬೇಕಾಗುತ್ತದೆ ಎಂದೂ ಅವರು ಹೇಳಿದ್ದಾರೆ.

‘ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ದೇಶಗಳ ಪೈಕಿ ಯುರೋಪ್‌ ರಾಷ್ಟ್ರಗಳೇ ಪ್ರಮುಖವಾಗಿವೆ. ಹೀಗಾಗಿ ಐರೋಪ್ಯ ರಾಷ್ಟ್ರಗಳು ತೈಲ ಆಮದನ್ನು ನಿಷೇಧಿಸಬೇಕು. ಇದರಿಂದ ರಷ್ಯಾದ ಆರ್ಥಿಕ ಶಕ್ತಿ ಕುಗ್ಗಲಿದ್ದು, ಅದು ಉಕ್ರೇನ್‌ ಮೇಲೆ ಸಾರಿರುವ ಯುದ್ಧಕ್ಕೆ ಹಣಕಾಸು ಬಿಕ್ಕಟ್ಟು ಎದುರಿಸಲಿ ಎಂಬುದು ಈ ಕ್ರಮದ ಉದ್ದೇಶ’ ಎಂದೂ ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.