ADVERTISEMENT

ಸುಳ್ಳು ವರದಿ ಪ್ರಸಾರ: ರಷ್ಯಾ ಮಾಧ್ಯಮಗಳಿಗೆ ಐರೋಪ್ಯ ಒಕ್ಕೂಟ ನಿಷೇಧ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಮಾರ್ಚ್ 2022, 15:57 IST
Last Updated 2 ಮಾರ್ಚ್ 2022, 15:57 IST
ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌
ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌   

ಉಕ್ರೇನ್‌ ಮೇಲಿನ ಆಕ್ರಮಣದ ಕುರಿತು ಸುಳ್ಳು ವರದಿಗಳನ್ನು ಬಿತ್ತರಿಸುತ್ತಿವೆ ಎಂದು ಆರೋಪಿಸಿ ರಷ್ಯಾ ಸರ್ಕಾರಿ ಸ್ವಾಮ್ಯದ ಮಾಧ್ಯಮಗಳನ್ನು ಐರೋಪ್ಯ ಒಕ್ಕೂಟ ನಿಷೇಧಿಸಿದೆ.

ಐರೋಪ್ಯ ಒಕ್ಕೂಟದ 27 ದೇಶಗಳಲ್ಲಿ ಈ ನಿಷೇಧವು ಜಾರಿಗೆ ಬರಲಿದೆ ಎಂದು ಸುದ್ದಿಸಂಸ್ಥೆ ‘ರಾಯಿಟರ್ಸ್‌’ ವರದಿ ಮಾಡಿದೆ.

ರಷ್ಯಾ ಟುಡೇ ಮತ್ತು ಸ್ಪುಟ್ನಿಕ್ ಮಾಧ್ಯಮಗಳನ್ನು ನಿಷೇಧಿಸಲಾಗಿದೆ ಎಂದು ಐರೋಪ್ಯ ಒಕ್ಕೂಟ ಹೇಳಿದೆ.

ADVERTISEMENT

‘ಪುಟಿನ್‌ ಅವರ ಯುದ್ಧವನ್ನು ಸಮರ್ಥಿಸಲು ಸರ್ಕಾರಿ ಸ್ವಾಮ್ಯದ ರಷ್ಯಾ ಟುಡೇ ಮತ್ತು ಸ್ಪುಟ್ನಿಕ್ ಮಾಧ್ಯಮಗಳನ್ನು ಬಳಸಲಾಗುತ್ತಿದೆ. ವ್ಯವಸ್ಥಿತವಾಗಿ ಸುಳ್ಳುಗಳನ್ನು ಹರಡಲಾಗುತ್ತಿದೆ. ಆದ್ದರಿಂದ, ಈ ಚಾನಲ್‌ಗಳ ವಿಷಕಾರಿ ಮತ್ತು ಹಾನಿಕಾರಕ ಸುಳ್ಳು ವರದಿಗಳ ಪ್ರಸಾರವನ್ನು ಯುರೋಪ್‌ನಲ್ಲಿ ತಡೆಯಲು ನಿರ್ಧರಿಸಿದ್ದೇವೆ’ ಎಂದು ಐರೋಪ್ಯ ಒಕ್ಕೂಟದ ಮುಖ್ಯಸ್ಥೆ ಉರ್ಸುಲಾ ವ್ಯಾನ್ ಡೆರ್‌ ಲೆಯೆನ್‌ ತಿಳಿಸಿದ್ದಾರೆ.

ಪಾಶ್ಚಿಮಾತ್ಯ ದೇಶಗಳು ಮತ್ತು ವಿಶ್ವ ಸಮುದಾಯದ ಎಚ್ಚರಿಕೆಯನ್ನು ಧಿಕ್ಕರಿಸಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುರುವಾರ ಉಕ್ರೇನ್‌ನಲ್ಲಿ ‘ಮಿಲಿಟರಿ ಕಾರ್ಯಾಚರಣೆ’ ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.